Home ಜಿಲ್ಲೆ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹೃದಯ ತಪಾಸನೆ ಮಾಡಿಸಿ: ಡಾ. ಪ್ರಶಾಂತ ಪಾಟೀಲ

ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹೃದಯ ತಪಾಸನೆ ಮಾಡಿಸಿ: ಡಾ. ಪ್ರಶಾಂತ ಪಾಟೀಲ

ಬೀದರ:ಮಾ.೧: ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹೃದಯ ತಪಾಸಣೆಯನ್ನು ಆಗಾಗ ಮಾಡಿಸುತ್ತಿರಬೇಕೆಂದು ಹೈದರಾಬಾದನ ಕೇರ್ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ಪ್ರಶಾಂತ ಪಾಟೀಲ ತಿಳಿಸಿದರು.
ನಗರದ ಬ್ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಬೆ. ೧೦ ರಿಂದ ಮ. ೨ ಗಂಟೆಯವರೆಗೆ ಹೈದರಾಬಾದನ ಕೇರ್ ಆಸ್ಪತ್ರೆ ವತಿಯಿಂದ ಚಿಕ್ಕ ಮಕ್ಕಳ ಉಚಿತ ಹೃದಯ ತಪಾಸಣೆ ನಡೆಸಿದ ಪಾಟೀಲ ಅವರು ಪಾಲಕರ ಇಂದಿನ ಆಧುನಿಕತೆಯ ಆಹಾರ ಪದ್ಧತಿಯಿಂದಾಗಿ ಮಕ್ಕಳಲ್ಲಿ ಹೆಚ್ಚಿನ ಹೃದಯ ಸಂಬAಧಿ ಕಾಯಿಲೆಗಳು ಕಂಡುಬರುತ್ತಿವೆ. ಹೃದಯ ಬೆಳವಣಿಗೆ ಆಗದೇ ಇರುವುದು, ಹೃದಯದಲ್ಲಿ ರಂಧ್ರಗಳು ಕಾಣಿಸಿಕೊಳ್ಳುವುದು, ಹೃದಯ ಬಡಿತದ ಏರಿಳಿತ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಆಗಾಗ ಮಕ್ಕಳ ಹೃದಯ ತಪಾಸಣೆ ಮಾಡಿಸಬೇಕೆಂದು ಸಲಹೆ ನೀಡಿದರು.
ಉಚಿತ ಹೃದಯ ತಪಾಸಣೆ ಶಿಬಿರಕ್ಕೆ ಹಿರಿಯ ವೈದ್ಯರಾದ ಡಾ. ಸಿ.ಆನಂದರಾವ ಚಾಲನೆ ನೀಡಿದರು. ಇದೇ ವೇಳೆ ಬ್ರಿಮ್ಸ್ ಆಸ್ಪತ್ರೆಯ ಡಾ. ಶಿವಯೋಗಿ ಬಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಧ್ಯಾಹ್ನ ೨ ಗಂಟೆಯವರೆಗೆ ನೂರಕ್ಕೂ ಹೆಚ್ಚು ಮಕ್ಕಳ ಹೃದಯ ತಪಾಸಣೆ ಮಾಡಲಾಯಿತು ಎಂದು ಡಾ. ಪ್ರಶಾಂತ ಪಾಟೀಲ ತಿಳಿಸಿದ್ದಾರೆ.