Home ಜಿಲ್ಲೆ ಕಲಬುರಗಿ ಕಾನೂನಿನ ಸಾಮಾನ್ಯ ಜ್ಞಾನ ವಿದ್ಯಾರ್ಥಿಗಳಿಗೆ ಅವಶ್ಯಕ : ಅಟ್ಟೂರ

ಕಾನೂನಿನ ಸಾಮಾನ್ಯ ಜ್ಞಾನ ವಿದ್ಯಾರ್ಥಿಗಳಿಗೆ ಅವಶ್ಯಕ : ಅಟ್ಟೂರ

ಕಲಬುರಗಿ :ಮೌನ ದೌರ್ಜನ್ಯಕ್ಕೆ ದಾರಿ ನೀಡಿದರೆ, ಮಹಿಳಾ ಗಟ್ಟಿ ಧ್ವನಿ ನ್ಯಾಯಕ್ಕೆ ದಾರಿ ಮಾಡಿ, ಸಬಲತೆಗೊಳಿಸುತ್ತದೆ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಹಣಮಂತರಾಯ ಅಟ್ಟೂರ ಹೇಳಿದರು.
ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ 2012(PಔಅSಔ) ಕಾಯ್ದೆ ಕುರಿತು ಉಚಿತ ಕಾನೂನು ಅರಿವು ಮೂಡಿಸುತ್ತ ಮಕ್ಕಳ ಸುರಕ್ಷತೆ ಕೇವಲ ಕಾನೂನಿನ ಜವಾಬ್ದಾರಿಯಲ್ಲ. ಅದು ಪೆÇೀಷಕರು, ಶಿಕ್ಷಕರು, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಪೆÇೀಕ್ಸೋ ಕಾಯ್ದೆ 2012 ರಲ್ಲಿ ಜಾರಿಗೊಳಿಸಲಾಯಿತು.2019 ರಲ್ಲಿ ಮತ್ತೆ ಕಠಿಣವಾಗಿ ತಿದ್ದುಪಡಿಗೋಳಿಸಲಾಯಿತು. ಆದರೂ ದಿನನಿತ್ಯ ಈ ಅಪರಾಧಗಳು ನಡೆಯುತ್ತಿರುವುದು ವಿಷಾದಕಾರ ಸಂಗತಿ.ಪೆÇೀಕ್ಸೋ ಕಾಯ್ದೆ ಅಡಿಯಲ್ಲಿ ಅಪರಾದ ಮಾಡಿದವರಿಗೆ ನ್ಯಾಯಾಲಯವು ಕನಿಷ್ಠ 2 ವರ್ಷದಿಂದ ಗರಿಷ್ಟ 20ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಅಲ್ಲದೆ ಘೋರ ಅಪರಾಧ ನಡೆದರೆ ಮರಣ ದಂಡನೇ ಶಿಕ್ಷೆ ವಿಧಿಸಲಾಗುತ್ತದೆ.ಮೊದಲು ಮಕ್ಕಳು ಕಾನೂನು ತಿಳಿದುಕೊಂಡು ಜಾಗೃತರಾಗಬೇಕೆಂಬ ಉದ್ದೇಶದಿಂದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಹಾಗೂ ನೆರವು ನೀಡುತ್ತಿದೆ.
ಕೊನೆಯದಾಗಿ, ನಿಮಗೆ ಯಾವುದೇ ಸಮಸ್ಯೆ ಎದುರಾದರೆ ಹೆದರಬೇಡಿ, ಮುಚ್ಚಿಡಬೇಡಿ, ಧೈರ್ಯವಾಗಿ ಹೇಳಿಕೊಳ್ಳಿ. ನಿಮ್ಮ ರಕ್ಷಣೆಗೆ ಕಾನೂನು ಇದೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಗುರುಗಳಾದ ಕೌಸರ ಬೇಗಂ, ಶಿಕ್ಷಕರಾದ ಶಾಂತಕುಮಾರ ಡೆಂಗೆ, ರೇಣುಕಾ, ಜ್ಯೋತಿ ಎಸ್, ಅಶೋಕ, ವಿಜಯಲಕ್ಷ್ಮಿ, ಸಾಹಿಲ್ ಸುಲ್ತಾನ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು