ಗೌರಿ ಗಣೇಶ -ಈದ್ ಮಿಲಾದ್ – ಪೊಲೀಸ್ ಹದ್ದಿನ ಕಣ್ಣು

ಕೋಲಾರ,ಆ,೨೩- ಗೌರಿ,ಗಣೇಶ-ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕೋಲಾರ ಹಾಗೂ ಕೆ.ಜಿ.ಎಫ್ ಎರಡು ವಿಭಾಗದ ವ್ಯಾಪ್ತಿಗೆ ಬರಲಿರುವ ಪ್ರತಿಯೊಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಳಿ ಶಾಂತಿ ಸಭೆಯನ್ನು ನಡೆಸಲಾಗಿದೆ. ಹಬ್ಬಗಳ ಆಯೋಜಕರು .ಎರಡು ಕೋಮುಗಳ ಮುಖಂಡರುಗಳನ್ನು ಸಂಬಂಧ ಪಟ್ಟ ಠಾಣೆಗಳಿಗೆ ಕರೆಸಿ ಶಾಂತಿ ಹಾಗೂ ಸೌಹಾರ್ದತೆಯ ಮಾತುಕತೆಗಳನ್ನು ನಡೆಸಲಾಗುತ್ತಿದೆ.


ಗೌರಿ ಗಣೇಶ-ಈದ್ ಮಿಲಾದ್ ಎರಡು ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಪಾಲಿಸ ಬೇಕಾದ ನಿಯಾಮವಾಳಿಗಳ ಕುರಿತು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಹಾಗೂ ಸಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ.


ಉತ್ಸವಗಳು, ಮೆರವಣಿಗಳಿಗೆ ನಿಗಧಿತ ರಸ್ತೆಗಳನ್ನು ಸೂಚಿಸಲಾಗಿದೆ. ಭದ್ರತಾ ದೃಷ್ಠೀಯಿಂದ ಸಂಬಂಧ ಪಟ್ಟ ನಿಗಧಿತ ರಸ್ತೆಗಳಲ್ಲಿ ಸಿ.ಸಿ. ಟಿ.ವಿಗಳನ ಅಳವಡಿಕೆಗೆ ಈಗಾಲೇ ಸೂಚಿಸಲಾಗಿದೆ. ಮೆರವಣಿಗೆ ವೇಳೆ ಯಾವೂದೇ ರೀತಿ ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡುವಂತೆ, ಕೆರಳಿಸುವಂತ ಘೋಷಣೆಗಳನ್ನು ಕೊಗಬಾರದು. ಬ್ಯಾನರ್,ಪ್ಲೇಕ್ಸಿಗಳು,ಕಟೌಟ್‌ಗಳು ರಸ್ತೆಗಳಲ್ಲಿ ಅಳವಡಿಸಲು ಅನುಮತಿ ಪಡೆಯಬೇಕು.


ನಗರ ವ್ಯಾಪ್ತಿಗೆ ಸೇರಿದ ವಿವಿಧ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಸ್ನೇಹಿ ಗಣೇಶಗೌರಿ ಸ್ಥಾಪಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳಗಳನ್ನು ಸಂಬಂಧ ಪಟ್ಟ ಠಾಣೆಯ ವತಿಯಿಂದ ಪರಿಶೀಲಿಸಲಾಗುವುದು. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಸೂಚಿಸಲಾಗಿದೆ.


ನಗರಸಭೆ,ಪುರಸಭೆ, ಹಾಗೂ ಪುರಸಭೆಗಳೊಂದಿಗೆ ಜೂತೆಗೊಡಿ ರೂಟ್‌ಗಳನ್ನು ಜಂಟಿಯಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಯಾವೂದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳ ನೀಡುವವರ ಬಗ್ಗೆ ನಿಗವಹಿಸಿದ್ದು ಶಾಂತಿಗೆ ಭಂಗವುಂಟು ಮಾಡುವಂತ ಹೇಳಿಕೆಗಳ ಬಗ್ಗೆ ಕಠಿಣಾ ಕ್ರಮವಹಿಸಿಲು ಪೊಲೀಸ್ ಕಮೀಷನರ್ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.