ಸಂಜೆ ವಾಣಿ ವಾರ್ತೆ
ಜಮಖಂಡಿ:ಸೆ.೧: ನಗರದಲ್ಲಿ ಸಡಗರ ಸಂಭ್ರಮದಿAದ ಆರಂಭವಾಗಿದ್ದ ಗಣೇಶ ಚತುರ್ಥಿ ಹಬ್ಬದಂದು ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಐದನೇ ದಿನಂದು ರವಿವಾರ ರಾತ್ರಿ ವಿಜೃಂಭಣೆಯಿAದ ಜರುಗಿತು.
ತಾಲೂಕಿನ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶನನ್ನು ರವಿವಾರ ರಾತ್ರಿ ವಿಸರ್ಜನೆ ಮಾಡಲಾಯಿತು. ಯುವಕ- ಮಕ್ಕಳು ಪಟಾಕಿ ಸಿಡಿಸಿ, ಗಣೇಶನನ್ನು ಸಡಗರ ಸಂಭ್ರಮದಿAದ ವಿಸರ್ಜನೆ ಮಾಡಿದರು.
ಶ್ರೀ ಗಜಾನನ ಮಹಾ ಮಂಡಳ,ನಗರಸಭೆ ವತಿಯಿಂದ ಗಣೇಶ ವಿಸರ್ಜನೆಗಾಗಿ ನಗರದ ಲಕ್ಕನ ಕೆರೆ,ಆನಿ ಕೆರೆ,ಶಾಂತಿ ನಗರದಲ್ಲಿ ಹೊಂಡ ನಿರ್ಮಿಸಿದರು ಅದೆ ಸ್ಥಳದಲ್ಲಿ ಸಾರ್ವಜನಿಕರು ಗಣೇಶ ವಿಸರ್ಜನೆ ಮಾಡಿದರು. ನಗರದಲ್ಲಿ ೧೦೦೦ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ವಿಸರ್ಜನೆ ಮಾಡಲಾಯಿತು.
ಮನೆಗಳಲ್ಲಿ ಹಾಗೂ ಕೆಲವು ಸಾರ್ವಜನಿಕ ಸ್ಥಳಗಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕೂಡ ಜರುಗಿತು. ಐದು ದಿನ ಬಗೆ ಬಗೆಯ ಅಡುಗೆ ತಯಾರಿಸಿ ಸಾರ್ವಜನಿಕರಿಗೆ ಅನ್ನ ಪ್ರಸಾದ್ ವಿತರಣೆ ಕಾರ್ಯಕ್ರಮಗಳು ಕೊಡ ಜರುಗಿತು.
ಬಳಿಕ ಸಂಪ್ರದಾಯದAತೆ ಗಣೇಶನಿಗೆ ಕೊನೆಯ ಪೂಜಾ ಕೈಂಕರ್ಯಗಳನ್ನು ನೇರವೆರಿಸಿ,ಶನಿ ದೋಷ ಗಳನ್ನು ದೂರ ಮಾಡು ಗಣೇಶ ಎಂದು ಬೇಡಿಕೊಂಡು ವಿಸರ್ಜಿಸಿದರು.
ಶ್ರೀ ಗಜಾನನ ಮಹಾ ಮಂಡಳ ಗೌರಾದ್ಯಕ್ಷ ಮುತ್ತಿನಕಂತಿ ಮಠದ ಷ.ಬ್ರ.ಶಿವಲಿಂಗ ಪಂಡಿತ್ತಾರಾಧ್ಯ ಶ್ರೀಗಳು,ರೂದ್ರಾವಧೂತ ಮಠ ಕೃಷ್ಣಾನಂದ ಶ್ರೀಗಳು ಮಾತನಾಡಿ
ನಾವೆಲ್ಲರೂ ಹಬ್ಬವನ್ನು ಆಚರಣೆ ಮಾಡುತ್ತಾಯಿದ್ದರೆ ಪೌರಕಾರ್ಮಿಕರು ಹಾಗೂ ಪೋಲಿಸ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತಿದ್ದಾರೆ ಆದರಿಂದ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅದರ ಜೊತೆಗೆ ನಗರಸಭೆ,ಪೋಲಿಸ್ ,ತಾಲೂಕಾಡಳಿತ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದ್ದಿಗಳಿಗೆ ಸಹಕಾರ ನೀಡಿದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಶ್ರೀ ಗಜಾನನ ಮಹಾಮಂಡಳ ಸಂಸ್ಥಾಪಕ ಅದ್ಯಕ್ಷ ಡಾ.ರಾಕೇಶ ಲಾಡ,ಅದ್ಯಕ್ಷ ಸಚಿನ್ ಪಟ್ಟನಶೇಟ್ಟಿ,ಗಣೇಶ ಶಿರಗಣ್ಣವರ,ಅಜಯ ಕಡಪಟ್ಟಿ,ಕುಶಾಲ ವಾಘಮಾರೆ,ರಮೇಶ ಘಾಟಗೆ,ರಾಘವೇಂದ್ರ ಮೂಲಂಗಿ, ವಿನೋದ ತೆಳಗಡೆ,ಬಸವರಾಜ ಕಲೂತಿ,ಗೋಪಾಲ ಪಾಟೀಲ,ಪ್ರದೀಪ ಮೆಟಗುಡ್ಡ,ಶಂಕರ ಕಾಳೆ,ಈರಯ್ಯಾ ಕರಡಿ,ಶಂಕರ ಕಾಳೆ,ಪ್ರಶಾಂತ ಚರಕಿ,ಪವನ ಸಾಳೂಂಕೆ,ವಿನಾಯಕ ಪವಾರ ಇನ್ನಿತರರು ಇದ್ದರು























