ಕೋಲಾರ,ಆ.೨೮: ನಗರದ ಪಾಲಸಂದ್ರದಲ್ಲಿ ಲೇಔಟ್‌ನಲ್ಲಿ ಯುವಸೇನಾ ಮಿತ್ರ ಬಳಗದ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಶ್ರದ್ಧಾಭಕ್ತಿಗಳಿಂದ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಮುಖಂಡ ಸಿ.ಎಂ.ಆರ್.ಶ್ರೀನಾಥ್ ಬೇಟಿ ನೀಡಿ ಪ್ರತಿಯೊಂದು ಕೆಲಸದ ಸಂದರ್ಭದಲ್ಲಿ ಮೊದಲಿಗೆ ವಿನಾಯಕನನ್ನು ಪೂಜಿಸುವ ಮೂಲಕ ತಮಗೆ ಒಳ್ಳೆಯಾಗಲಿ ಎಂದು ಆಶಿಸುವುದು ವಾಡಿಕೆ. ಈ ನಿಟ್ಟಿನಲ್ಲಿ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿರುವುದು ಶ್ಲಾಘನೀಯ. ನಿಮಗೆ ವಿದ್ಯೆ, ಬುದ್ಧಿ ಕರುಣಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಣಕನಹಳ್ಳಿ ನಟರಾಜ್, ಕೆ.ಎಸ್.ಗಣೇಶ್, ವೆಂಕಟೇಶ್(ಕೊಂಡಿ), ಯುವ ಮುಖಂಡ ಸುರೇಶ್, ಲೇಔಟ್‌ನ ನಿವಾಸಿಗಳು, ಯುವಕರು, ಭಕ್ತಾದಿಗಳು ಇದ್ದರು.


























