ಗಣೇಶ ಚತುರ್ಥಿ- ಈದ್ ಮಿಲಾದ ಹಬ್ಬ: ಸ್ವಚ್ಚತೆ ಕಾಪಾಡಲು ಬೀದಿವ್ಯಾಪಾರಿಗಳಿಗೆ ಕರೆ

ಕಲಬುರಗಿ,ಆ.೨೬- ಗಣೇಶ ಚತುರ್ಥಿ ಮತ್ತು ಈದ್ ಮಿಲಾದ ಹಬ್ಬಗಳಲ್ಲಿ ಬೀದಿಬದಿಯ ವ್ಯಾಪಾರದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಮತ್ತು ಸ್ವಚ್ಛತೆಗೆ ಮೊದಲ ಆದತ್ಯೆ ನೀಡುವಂತೆ ಕರ್ನಾಟನ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಮನವಿ ಮಾಡಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಬೀದಿ ವ್ಯಾಪಾರಿಗಳು ಗಣೇಶ ಚತುರ್ಥಿ ಹಬ್ಬ ಮತ್ತು ಈದ್ ಮಿಲಾದ ಹಬ್ಬದ ವ್ಯಾಪಾರದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು, ಅಲ್ಲದೇ ಈ ಹಬ್ಬವನ್ನು ಎಲ್ಲರೂ ಸೇರಿಕೊಂಡು ಸೌರ್ಹಾತಯುತವಾಗಿ ಆಚರಿಸಬೇಕು, ಇಂತಹ ಹಬ್ಬ ಹರಿದಿನಗಳಲ್ಲಿ ರಸ್ತೆ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಬೀದಿ ವ್ಯಾಪಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಶ್ರಮಿಕ ವರ್ಗಕ್ಕೆ ಸೇರಿದ ಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅಡೆತಡೆಯನ್ನು ಮಾಡದೇ ಸಂಬAಧಿಸಿದ ಅಧಿಕಾರಿಗಳು ಸಹಕಾರ ನೀಡಬೇಕು, ಹಬ್ಬ ಹರಿದಿನಗಳ ವ್ಯಾಪಾರವನ್ನು ನಂಬಿಕೊAಡಿರುವ ಬೀದಿವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಮುಂದುವರೆಸಲು ಅನುವು ಮಾಡಿಕೊಡುವಂತೆ ಸೂರ್ಯವಂಶಿ ಅವರು ಮನವಿ ಮಾಡಿದ್ದಾರೆ.