ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿಜಿ ಪುಣ್ಯತಿಥಿ ಆಚರಣೆ

ಬೀದರ್: ಜ.೩೧:ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿಜಿ ಪುಣ್ಯತಿಥಿ ಆಚರಿಸಲಾಯಿತು.
ಮಹಾತ್ಮ ಗಾಂಧಿಜಿ ಅವರು ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸಿಕೊಟ್ಟಿದ್ದರು. ದೇಶಕ್ಕಾಗಿ ಬದುಕು ಮುಡುಪಾಗಿಟ್ಟಿದ್ದರು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಹೇಳಿದರು.
ಪ್ರಸ್ತುತ ಗಾಂಧಿಜಿ ಅವರ ಹೆಸರು ಮರೆ ಮಾಚುವ ಪ್ರಯತ್ನ ನಡೆದಿದೆ. ಆದರೆ, ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಗಾಂಧಿಜಿ ಅವರು ಸತ್ಯ, ಅಹಿಂಸೆ ಮಾರ್ಗದಿಂದಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದು ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಹೇಳಿದರು.
ಎಲ್ಲಿಯವರೆಗೆ ದೇಶದ ಜನರಿಗೆ ಧರಿಸಲು ಬಟ್ಟೆ ಇರುವುದಿಲ್ಲವೋ ಅಲ್ಲಿಯವರೆಗೆ ನಾನೂ ಬಟ್ಟೆ ಧರಿಸುವುದಿಲ್ಲ ಎಂದು ಗಾಂಧಿಜಿ ಸಂಕಲ್ಪ ತೊಟ್ಟಿದ್ದರು ಎಂದು ವಿಠ್ಠಲದಾಸ್ ಪ್ಯಾಗೆ ತಿಳಿಸಿದರು.
ಮುಖಂಡರಾದ ಪ್ರದೀಪ್ ಕುಶನೂರ, ಪಂಡಿತರಾವ್ ಚಿದ್ರಿ, ರಘುನಾಥ ಜಾಧವ್, ನಿಸಾರ್ ಅಹಮ್ಮದ್, ಮಲ್ಲಿಕಾರ್ಜುನ ಬಿರಾದಾರ, ಸುನೀಲ್ ಬಚ್ಚನ್, ವಿಶಾಲ್ ದೊಡ್ಡಿ, ಎಂ.ಎಚ್. ರವೀಂದ್ರ, ಶಂಕರ ರೆಡ್ಡಿ, ಗೋವರ್ಧನ್ ರಾಠೋಡ್, ಷಣ್ಮುಕಪ್ಪ ಪಸರ್ಗೆ, ಜೈಸೂರು ರಾಯ್, ಶಂಕರ ಜ್ಯಾಂತಿಕರ್, ಮೋಹನ್ ಡಾಂಗೆ, ವೀರಶೆಟ್ಟಿ ಭೋಸ್ಲೆ, ವಿಜಯಲಕ್ಷ್ಮಿ, ಸಂಗೀತಾ, ಪ್ರೇಮಾ ಮತ್ತಿತರರು ಇದ್ದರು.
ಕಾಂಗ್ರೆಸ್ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ನಿರೂಪಿಸಿದರು.