Home ಜಿಲ್ಲೆ ಕಲಬುರಗಿ ತೆಗನೂರ ಕಾಲೇಜಿನಲ್ಲಿ ಗಾಂಧಿ ಜಯಂತಿ

ತೆಗನೂರ ಕಾಲೇಜಿನಲ್ಲಿ ಗಾಂಧಿ ಜಯಂತಿ

ಕಲಬುರಗಿ: ಭಾರತ ದೇಶದ ಸ್ವಾತಂತ್ರ್ಯ ಸಲುವಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ತಾನು ಮಾತ್ರ ಅದರ ವೈಭವವನ್ನು ಹಾಗೂ ಉನ್ನತ ಹುದ್ದೆಯನ್ನು ಅಲಂಕರಿಸದೆ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದೆ ಮಹಾತ್ಮ ಗಾಂಧಿ ಅವರ 154ನೇ ಜಯಂತಿಯನ್ನು ನಗರದ ಗುಬ್ಬಿ ಕಾಲೋನಿ ಎಸ್ ಎಸ್ ತೇಗನೂರ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಆರಂಭದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನಿರುಣಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಜಿಲ್ಲೆಯ ಗಾಂಧಿ ವಿಚಾರ ವೇದಿಕೆ ಹಾಗೂ ಎಸ್ ಎಸ್ ತೆಗನೂರು ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಯಿತು . ಸಮಾರಂಭದಲ್ಲಿ ಗಾಂಧೀಜಿ ಕಂಡ ಭಾರತ ಎಂಬ ವಿಷಯ ಕುರಿತು ಕೆಬಿಎನ್ ವಿಶ್ವವಿದ್ಯಾಲಯದ ಕನ್ನಡ ಸಹ ಪ್ರಧ್ಯಾಪಕ ಡಾಕ್ಟರ್ ಸಂಗನಗೌಡ ಹಿರೇಗೌಡರ್ ಅವರು ಬಹಳ ವಿಸ್ತೃತವಾಗಿ ಅಷ್ಟೇ ಸರಳವಾಗಿ ಮಕ್ಕಳಿಗೆ ಮನಮುಟ್ಟುಹಾಗಿ ಹೇಳಿದರು ನಾವು ಎಷ್ಟು ಓದಿಕೊಳ್ಳುತ್ತೇವೆ ಅಷ್ಟು ಸ್ವತಂತ್ರವಾಗಿ ಬದುಕಬಹುದು ಅಂತಹ ಮಹತ್ವದ ಅಂಶಗಳನ್ನು ಗಾಂಧೀಜಿಯವರು ತಮ್ಮ ಜೀವನದ ಉದ್ದಕ್ಕೂ ಪಾಲಿಸಿಕೊಂಡೆ ಬಂದವರು ಅಂತಹ ಮಹಾತ್ಮನ ಜಯಂತಿಯನ್ನು ಆಚರಿಸಿ ಆತನ ಬಗ್ಗೆ ಕೆಲವು ವಿಷಯಗಳನ್ನು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಆರಂಭದಲ್ಲಿ ರಸ ಏಕ ಮಾತುಗಳನ್ನು ವೇದಿಕೆಯ ಗೌರವ ಸದಸ್ಯರಾದ ಅಬ್ದುಲ್ ವಹಿದ್ ಮಾತನಾಡಿದರು ಪ್ರಾರ್ಥನೆ ಗೀತೆಯನ್ನು ಕಾಲೇಜಿನ ವಿದ್ಯಾರ್ಥಿನಿಯರು ನೆರವೇರಿಸಿ ಕೊಟ್ಟರು ಸರ್ವರನ್ನ ಸ್ವಾಗತಿಸಿದವರು ಸಹಾಯಕ ಪ್ರಾಧ್ಯಾಪಕರಾದ ರಮೇಶ್ ಬಡಿಗೇರವರು ಕೋರಿದರು ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿಗಳಾದ ಆಕಾಶ್ ತಿಗನೂರವರು ವಹಿಸಿ ಗಾಂಧೀಜಿಯವರ ಕುರಿತಾಗಿ ಇಂದಿನ ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು ಸಭೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿಗಳಾದ ಗಿರೀಶ್ ಪಾಟೀಲ್ ಅವರು ವೇದಿಕೆ ಮತ್ತು ಗಾಂಧೀಜಿಯವರ ಕುರಿತು ಕೆಲವು ಮಾತುಗಳನ್ನ ಹಂಚಿಕೊಂಡರು ಸಭೆಯಲ್ಲಿ ವೇದಿಕೆಯ ಸದಸ್ಯರಾದ ಕಿರಣ್ ಪಾಟೀಲ್ ಎಂ ಸಂಜೀವ್ ಉಪಸ್ಥಿತರಿದ್ದರು ಕೊನೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದ ಮಠಪತಿ ಸರ್ ಗೌರವ ವಂದನೆಯನ್ನು ತಿಳಿಸಿದರು.