
ಕೋಲಾರ,ಡಿ , ೪- ಕೆಜಿಎಫ್ ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿಗೆ ನೀಡಿರುವ ೨೦೨೩-೨೪ ಗ್ರಾಪಂಗೆ ’ಗಾಂಧಿ ಗ್ರಾಮ ಪುರಸ್ಕಾರ’ ವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಗ್ರಾಪಂ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ಹಾಗೂ ಪಿ ಡಿ ಓ ಶ್ರೀನಿವಾಸ್ ಮೂರ್ತಿ ಅವರು ಸ್ವೀಕರಿಸಿದರು.
ಕೆಜಿಎಫ್ ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಸರ್ವಾಂಗೀಣ ಅಭಿವೃದ್ಧಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಸಿಬ್ಬಂದಿ ವೇತನ ಬಟವಾಡೆ, ಕಾಲಕಾಲಕ್ಕೆ ಗ್ರಾಪಂ ಸಾಮಾನ್ಯ ಸಭೆ, ಗ್ರಾಮಸಭೆ ನಡೆಸಿರುವುದು.
ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ (ಸಭಾಂಗಣ) ವನ್ನು ನರೇಗಾ ಯೋಜನೆಯ ೨೦ ಲಕ್ಷ ಅನುದಾನ ಹಾಗೂ ಗ್ರಾಮ ಪಂಚಾಯಿತಿಯ ಇತರೆ ಅನುದಾನವನ್ನು ಬಳಸಿಕೊಂಡು ಸುಸಜ್ಜಿತವಾಗಿ ಕಟ್ಟಡವನ್ನು ಸಹ ನಿರ್ಮಿಸಿದ್ದಾರೆ.
ಸಾರ್ವಜನಿಕರಿಗೆ ಸಕಾಲ ಸೇವೆ ನೀಡಿಕೆಯಲ್ಲಿಯೂ ಯಶಸ್ವಿ ತೆರಿಗೆ ವಸೂಲಿಯಲ್ಲಿ ದಾಖಲೆ, ನರೇಗಾ ಕಾಮಗಾರಿಗಳಲ್ಲಿ ಪಾರದರ್ಶಕತೆ, ಸರ್ಕಾರದ ವಿವಿಧ ಯೋಜನೆಗಳ ಅನುದಾನದ ಸದ್ಬಳಕೆ ಸೇರಿ ೩೦ಕ್ಕೂ ಹೆಚ್ಚು ವಿಷಯಗಳಲ್ಲಿನ ಸಾಧನೆಗಾಗಿ ಕಳೆದ ೨೦೨೩-೨೪ನೇ ಸಾಲಿನಲ್ಲಿ ಗ್ರಾ.ಪಂ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು
ಅಭಿವೃದ್ಧಿಗೆ ಅಗತ್ಯ ಕ್ರಮ: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಗ್ರಾ.ಪಂಗೆ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆ, ಚರಂಡಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಅಡುಗೆ ಕೋಣೆ ನಿರ್ಮಾಣ ಹಾಗೂ ಅಂಗನವಾಡಿ ಕೇಂದ್ರಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಆವರಣಗಳಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ.
ಟಿ.ಗೊಲ್ಲಹಳ್ಳಿ ಗ್ರಾಪಂ ಅನ್ನು ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಪಂ ಮಾಡುವ ಸಂಕಲ್ಪ ಕೈಗೂಡಲು ಗ್ರಾಮೀಣ ಪ್ರದೇಶದಲ್ಲಿ ಕಸ ವಿಂಗಡಣೆ ಆರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಸ್ವಚ್ಛತೆ ನರೇಗಾ ಕಾಮಗಾರಿಗಳ ಅಭಿವೃದ್ಧಿ ಕೇಂದ್ರಗಳಲ್ಲಿ ಮೂಲಭೂತ ಸೌಲತ್ತುಗಳು ಒದಗಿಸಲಾಗಿದೆ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯ ಹಳ್ಳಿಗಳಲ್ಲಿ ವಾರಕ್ಕೆ ಎರಡು ಬಾರಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ.
ಗ್ರಾ.ಪಂ.ಮಂಜುನಾಥ್ ಅವರು ಮಾತನಾಡಿ ಗಾಂಧಿ ಪುರಸ್ಕಾರ, ಗ್ರಾಪಂನ ಸ್ವಚ್ಛತಾ. ಗ್ರಾಪಂನ ಎಲ್ಲಾ ಸದಸ್ಯರು ಹಾಗೂ ಪಿಡಿಒ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿರುವುದರಿಂದ, ಹಾಗೂ ಶಾಸಕರ ಸಹಕಾರದಿಂದ ನಮ್ಮ ಗ್ರಾಪಂ ಅಭಿವೃದ್ಧಿ ಪಡಿಸಿದ್ದಕ್ಕೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದ್ದು ಸಂತಸ ತಂದಿದೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ೫ ಲಕ್ಷ ರೂಗಳ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಿದ್ದು ಈ ಹಣವನ್ನು ಗ್ರಾಮ ಪಂಚಾಯಿತಿ ೨೫೨೩ ಈಂ ಸಾಮಾನ್ಯ ಸಭೆಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ ಈ ಅನುದಾನವನ್ನು ಬಳಕೆ ಮಾಡಿಕೊಳ್ಳುವುದಾಗಿ ಹೇಳಿದರು.
ಗ್ರಾಪಂನಲ್ಲಿ ಅಧಿಕಾರಿಗಳು, ಆಡಳಿತ ಮಂಡಳಿ ಒಮ್ಮತದಿಂದ ಸ್ವಚ್ಛತೆ ನರೇಗಾ ಯೋಜನೆಯ ಅಭಿವೃದ್ಧಿ ಹಾಗೂ ಅಂಗನವಾಡಿ ಶಾಲಾ ಆವರಣಗಳಲ್ಲಿ ಸ್ವಚ್ಛತೆ ಗ್ರಾಮಗಳಲ್ಲಿ ವಾರಕ್ಕೆ ಎರಡು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರಿಂದ ಹಾಗೂ ಈ ತಂತ್ರಾಂಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರಿಂದ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿದೆ.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಪಿಡಿಒ ಅವರನ್ನು ಶ್ಲಾಘಿಸುವುದಾಗಿ ಹೇಳಿದ ಅವರು ಗ್ರಾಮಗಳಲ್ಲಿ ಜನತೆಗೆ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ಗ್ರಾಪಂ ಶ್ರಮಿಸುತ್ತಿದೆ.
ತಾಲೂಕಿನ ಗ್ರಾಮ ಪಂಚಾಯಿತಿ ಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಇತರೆ ಪಂಚಾಯಿತಿಗಳು ಸಹ ಗಾಂಧಿ ಗ್ರಾಮ ಪುರಸ್ಕಾರ ಪಡೆಯುವಂತಾಗಲಿ ತಾ.ಪಂ. ಇ.ಒ ವೆಂಕಟೇಶಪ್ಪ ಅಭಿಪ್ರಾಯ ಪಟ್ಟರು.




























