
ಕಲಬುರಗಿ,ಡಿ.24-ನಗರದ ಅಕ್ಕತಂಗಿ ಗುಡಿ ಹತ್ತಿರವಿವರುವ ಜಿಡಿಎ ಕಾಲೋನಿಯ ಉದ್ಯಾನವನದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಎಸ್‍ಐ ಕವಿತಾ ಚವ್ಹಾಣ್, ಸಿಬ್ಬಂದಿಗಳಾದ ತಾರಾಸಿಂಗ್, ಶಿವಾನಂದ, ಬಂದೇನವಾಜ್, ರಾಜಕುಮಾರ, ಅಭಿಷೇಕ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
ನಿಖಿಲ್ ಪಂಡಿತ್, ಶರಣು ಭರತನೂರ, ನಿಲೇಶ ಸೂರ್ಯವಂಶಿ, ಸಂಜಯಕುಮಾರ ಭರತನೂರ ಎಂಬುವವರನ್ನು ಬಂಧಿಸಿ 10,400 ರೂ.ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಆನಂದ ಅಲಿಯಾಸ್ ಚನ್ನು ಹಡಪದ ಎಂಬಾತ ಪರಾರಿಯಾಗಿದ್ದಾನೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ
ನಗರದ ಆಳಂದ ರಸ್ತೆಯ ರಾಣೆಸ್ಪೀರ್ ದರ್ಗಾ ಕ್ರಾಸ್ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಬಸವರಾಜ, ಸಿಬ್ಬಂದಿಗಳಾದ ಪುಂಡಲೀಕ, ಗುಂಡೇರಾವ ಅವರು ದಾಳಿ ನಡೆಸಿ ಸಿಂದಗಿ (ಬಿ) ಗ್ರಾಮದ ಸುನೀಲ ತಂದೆ ಶ್ರೀಮಂತ ಕಲಾಲ್ (33) ಎಂಬಾತನನ್ನು ಬಂಧಿಸಿ 2950 ರೂ.ಮೊತ್ತದ ಮದ್ಯ ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























