ಜೂಜಾಟ: 13 ಜನರ ಬಂಧನ, 2.11 ಲಕ್ಷ ರೂ.ಜಪ್ತಿ

ಕಲಬುರಗಿ,ಜ.16-ಇಲ್ಲಿನ ಜಯನಗರ ಕ್ರಾಸ್ ಹತ್ತಿರದ ಸಾರ್ವಜನಿಕ ರಸ್ತೆಯ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ ಮತ್ತು ಸಿಬ್ಬಂದಿಗಳಾದ ಅಶೋಕ, ರಾಜಕುಮಾರ ಗಂಧೆ, ಶಿವಕುಮಾರ, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ.
ಬಾಬುರಾವ ಗೋಗಿಕರ್, ಷಣ್ಮುಖಪ್ಪ ಹಳಿಮನಿ, ಶರಣಪ್ಪ ಪಡದಳ್ಳಿ, ಫಯಾಜ್, ಶಿವಕುಮಾರ ಕುಂಬಾರ, ಅಭಿಷೇಕ ಮಳದ, ಶಫೀಕ್, ಪ್ರವೀಣ್ ಸುಗೂರ, ನಟರಾಜ ಬಡಿಗೇರ, ಶಾಮಕುಮಾರ ಯಾದಗಿರಿ, ವೀರೇಶ ಸಜ್ಜನ್, ಅನೀಲಕುಮಾರ ರೆಡ್ಡಿ ಮತ್ತು ನಿಖಿಲ ಪಾಟೀಲ ಎಂಬುವವರನ್ನು ಬಂಧಿಸಿ 2,11,180 ರೂ.ನಗದು ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.