
ಕಲಬುರಗಿ:ಮೇ.1:ಗುಲ್ಬರ್ಗ ವಿಶ್ವವಿದ್ಯಾಲಯದ ಗಳಂಗಳಪ್ಪ ಪಾಟೀಲ್ (ಎಸ್ ಬಿ ಪಾಟೀಲ್) ಬಸವಾದಿ ಶರಣ ಸಾಹಿತ್ಯ ಕೇಂದ್ರದ ಸಭೆ ಕುಲಪತಿಗಳಾದ ಡಾ. ಶಶಿಕಾಂತ ಉಡಿಕೇರಿ ಅವರ ಅಧ್ಯಕ್ಷತೆಯಲ್ಲಿ ಜರುವಿತು .
ಸಭೆಯಲ್ಲಿ ಕೇಂದ್ರವು ಗುಲ್ಬರ್ಗ ಆಕಾಶವಾಣಿಯ ಸಹಯೋಗದೊಂದಿಗೆ ರಾಜ್ಯಮಟ್ಟದಲ್ಲಿ ಪ್ರಸಾರವಾಗುವ ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚರ್ಚಿಸಿತು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಶರಣರ ಸಂದೇಶಗಳನ್ನು ಸಾರುವ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು . ಅಜ್ಞಾತ ಶರಣರ ಕುರಿತಾಗಿರುವ ಸಂಶೋಧನಾತ್ಮಕ ಲೇಖನಗಳನ್ನು ಸಂಪಾದಿಸಿ ಪುಸ್ತಕಗಳನ್ನು ಪ್ರಕಟಿಸಲು ಸಮಾಲೋಚಿಸಲಾಯಿತು .
ವಚನ ಸಾಹಿತ್ಯ ಕುರಿತಾಗಿರುವ ಡಿಪೆÇ್ಲೀಮಾ/ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಲು ಚಿಂತಿಸಲಾಯಿತು .
ಸಭೆಯಲ್ಲಿ ಕುಲಸಚಿವರಾದ ಡಾ . ರಮೇಶ ಲಂಡನ್ ಕರ್ ,ಕೇಂದ್ರದ ನಿರ್ದೇಶಕರಾದ ಡಾ. ಎಸ್. ಎಂ . ಹನಗೂಡಿಮಠ, ಖಾಯಂ ಸದಸ್ಯರಾದ ಬಂಡಪ್ಪ ಕೇಸುರ್ ,ಡಾ. ವಿ ಜಿ ಅಂದಾನಿ , ಸಲಹಾ ಸಮಿತಿ ನಿರ್ದೇಶಕರಾದ ಡಾ. ಆನಂದ ಪಾಟೀಲ ಸಿದ್ಧಾಮಣಿ .ಡಾ. ಗಣಪತಿ ಸಿನ್ನೂರ್ , ಡಾ. ವೀರಶೆಟ್ಟಿ ಬಿ ಗಾರಂಪಳ್ಳಿ ಹಾಜರಿದ್ದರು



























