ಜಾನುವಾರುಗಳನ್ನು ವೈಜ್ಞಾನಿಕವಾಗಿ ಸಾಕಿದರೆ ಮಾತ್ರ ಸಂಪೂರ್ಣ ಲಾಭ: ಕೆ. ಸಿ. ವೀರಣ್ಣ

ಬೀದರ:ಅ.5:ಕರ್ನಾಟಕ ಪಶುವೈದ್ಯಕೀಯ, ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಹಾಗೂ ಟಾಟಾ ಟ್ರಸ್ಟ್‍ನ ಕಲಿಕೆ ಸಂಸ್ಥೆಯ ಸಹಭಾಗಿತ್ವದಲ್ಲಿ”ಕೃಷಿಯಿಂದ ಭವಿಷ್ಯ: ವೈಜ್ಞಾನಿಕ ಮೇಕೆ ಮತ್ತು ಕುರಿ ಸಾಕಾಣಿಕೆ ತಂತ್ರಜ್ಞಾನಗಳ ಮೂಲಕ ರೈತರ ಸಬಲೀಕರಣ” ಶಿರ್ಷಿಕೆಯಲ್ಲಿ ಯಾದಗಿರಿ ಜಿಲ್ಲೆಯ ರೈತರಿಗಾಗಿ ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪೆÇ್ರ. ಡಾ. ಕೆ. ಸಿ. ವೀರಣ್ಣ ರವರು, “ಗ್ರಾಮೀಣ ಜೀವನದಲ್ಲಿ ರೈತರು ಕೃಷಿಯೊಂದರ ಮೇಲೆ ಅವಲಂಬಿತರಾಗದೇ, ಪಶುಸಂಗೋಪನೆ, ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆ ಮುಂತಾದ ಪೂರಕ ಚಟುವಟಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ. ಜಾನುವಾರುಗಳನ್ನು ವೈಜ್ಞಾನಿಕವಾಗಿ ಸಾಕುವುದು ಹಾಗೂ ಮಾರುಕಟ್ಟೆಗೆ ತಲುಪಿಸುವಲ್ಲಿ ಮಧ್ಯವರ್ತಿಗಳನ್ನು ತಪ್ಪಿಸುವ ದೃಷ್ಟಿಕೋನವನ್ನು ರೈತರು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡೀನ್ ಡಾ. ಎಂ. ಕೆ. ತಾಂಡಳೆ ಅವರು ಮಾತನಾಡಿ, “ತರಬೇತಿಯು ರೈತರ ಜೀವನದಲ್ಲಿನ ಅನುಭವದ ಜತೆಗೆ ತಾಂತ್ರಿಕ ಜ್ಞಾನವನ್ನು ಸಂಯೋಜಿಸುವ ಒಂದು ದಶೆಯಾಗಿದೆ. ಈ ತರಬೇತಿ ಕಾರ್ಯಕ್ರಮಗಳ ಪ್ರಯೋಜನವನ್ನು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ಪಶುಸಂಗೋಪನೆಯ ದಾರಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಬಹುದು” ಎಂದು ಹೇಳಿದರು.

ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಬಸವರಾಜ್ ಅವಟಿ ಹಾಗೂ ಕಲಿಕೆ ಟ್ರಸ್ಟ್‍ನ ಲೈವ್ಲಿಹುಡ್ ಪೆÇ್ರೀಗ್ರಾಂ ಅಧಿಕಾರಿ ಶ್ರೀ ಹಸನರಾಜ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ತರಬೇತಿ ನಿರ್ದೇಶಕರಾದ ಡಾ. ಚಿಕ್ಕಗೌಡರ ಕೋಟ್ರೇಶ್ ಪ್ರಸಾದ್ ಹಾಗೂ ಸಹ ಸಂಯೋಜಕರಾಗಿ ಡಾ. ಪ್ರಕಾಶ್ ಕುಮಾರ್ ರಾಥೋಡ್, ಡಾ. ವಿದ್ಯಾಸಾಗರ್ ಮತ್ತು ಡಾ. ಚನ್ನಪ್ಪಗೌಡ ಬಿರಾದಾರ್ ರವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.