Home ಜಿಲ್ಲೆ ಸ್ನೇಹಸಮ್ಮೇಳನ

ಸ್ನೇಹಸಮ್ಮೇಳನ

ನವಲಗುಂದ,ಫೆ24 : ಸಮಾಜದಲ್ಲಿಯ ಸರ್ವರಿಗೂ ಶಿಕ್ಷಣ ದೊರಕುತ್ತಿದೆ. ಸರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳಿಗೆ ದೊರೆಯುವಂತೆ ನೋಡಿಕೊಂಡಿದೆ.ಪ್ರಾಥಮಿಕ ಶಿಕ್ಷಣ ಮನುಷ್ಯನ ಬದುಕಿಗೆ ಭದ್ರ ಬುನಾದಿ. ಶಾಲೆಗಳಲ್ಲಿ ಗುರುಗಳು ಮಕ್ಕಳ ಒಳತಿಗಾಗಿ, ಹಾಗೂ ವಿಕಾಸಕ್ಕಾಗಿ ತಮ್ಮ ವೃತ್ತಿ ಬದುಕು ಮೀಸಲಿರಿಸುತ್ತಾರೆ. ಪಾಲಕರು ಶಾಲೆಗಳಿಗೆ, ಶಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನವಲಗುಂದ ಪಂಚಗೃಹ ಹಿರೇಮಠದ ಉತ್ತರಾಧಿಕಾರಿ ವೀರಬಸವ ದೇವರು ನುಡಿದರು.

ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾಡಿನ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳ ಎದೆಯಲ್ಲಿ ಬಿತ್ತಬೇಕು.ಭವಿಷ್ಯದ ಸದೃಢ ಸಮಾಜದ ನಿರ್ಮಾಣಕ್ಕೆ ಇದು ಅತ್ಯಂತ ಅವಶ್ಯಕವಾಗಿದೆ.

ಗುರು ಹಿರಿಯರ ಬಗೆಗೆ ಗೌರವ ನೀಡುವದು,ರಾಷ್ಟ್ರ ಭಕ್ತಿ, ನಾಡು, ನುಡಿಯ ಬಗೆಗೆ ಅಭಿಮಾನ, ಸಾತ್ವಿಕ ಚಿಂತನೆ, ಸಹಾಯ, ಸಹಕಾರ, ಶಾಂತಿ, ಭಾವ?ಕ್ಯತೆಯ ಭಾವನೆಗಳನ್ನು ಮಕ್ಕಳಲ್ಲಿ ಒಡಮೂಡಿಸುವಲ್ಲಿ ಶಾಲೆಗಳ ಪಾತ್ರ ಬಹಳ ಮುಖ್ಯ. ” ಎಂದರು

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎ ಬಿ ಕೊಪ್ಪದ ಮಾತನಾಡಿ ” ಶಾಲೆಗಳು ಜ್ಞಾನ ದೇಗುಲಗಳು. ಮಕ್ಕಳಿಗೆ ಬದುಕು ನೀಡುವ, ಮೌಲ್ಯ ವೃದ್ಧಿಸುವ, ನೀತಿ, ಪ್ರೀತಿ ಸಂಸ್ಕೃತಿ, ಸಂಸ್ಕಾರ ಬೆಳೆಸುವ ಶೃದ್ಧಾ ಕೇಂದ್ರಗಳಾಗಿವೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ. ಸರಕಾರದ ಸೌಲಭ್ಯ ಸದುಪಯೋಗ ಪಡೆದುಕೊಂಡು ಮಕ್ಕಳ ಭವಿಷ್ಯ ರೂಪಿಸಲು ನಾವೆಲ್ಲರೂ ಒಟ್ಟಾಗಿ ಶೃಮಿಸೋಣ. ” ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕರ ಧಾರವಾಡ ಜಿಲ್ಲಾ ಅಧ್ಯಕ್ಷ ಆರ್. ಎಚ್. ನೆಗಲಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ. ಡಿ. ರಂಗಣ್ಣವರ ಮಾತನಾಡುತ್ತ ” ಇಂದಿನ ಮಕ್ಕಳು ಅತ್ಯಂತ ಚುರುಕಾಗಿದ್ದು, ವಿಜ್ಞಾನ ತಂತ್ರಜ್ಞಾನ ಸಹಾಯದಿಂದ ಶಾಶ್ವತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಕ್ರೀಯಾಶೀಲವಾಗಿ ಭೋದಿಸುತ್ತಿರುವದು ಶ್ಲಾಘನೀಯ ಕೆಲಸ. ” ಎಂದು ಹೇಳಿದರು.

ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ನಿಂಗಪ್ಪ. ಮಣಕವಾಡ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಲಿಂಗರಾಜ ಕಮತ, ಎನ್. ವಾಯ್. ಕಳಸಾಪೂರ, ಎಲ್. ವಾಯ್. ರಾಯಪ್ಪನವರ, ಗಣೇಶ ಹೊಳೆಯಣ್ಣವರ, ಶಿವಾನಂದ ಬೆಂಚಿಕೇರಿ, ಎಸ್. ಸಿ. ಜಂಗಣ್ಣವರ, ಎನ್. ಎನ್. ಹಾಲಿಗೇರಿ ರಾಜೇಶ್ವರಿ. ಖಂಡಿಬಾಗಿಲ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಹುಚ್ಚಪ್ಪ. ಭೋವಿ ಹಾಗೂ ಸಹಜ ಕೃಷಿಕ ಶೌಕತಅಲಿ. ಲಂಬೂನವರ, ಪುರಸಭೆಯ ಆರೋಗ್ಯ ಅಧಿಕಾರಿ ಸಾವಿತ್ರಿ ಹಾಗೂ ಪಾಲಕರನ್ನು ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಶಾಲೆಯ ಪ್ರಧಾನ ಗುರು ನೀಲಯ್ಯ. ತಾಳಿಕೋಟಿಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಡಿ. ಎಚ್. ಮಳಲಿ, ಆರ್. ಎಸ್. ಕಲ್ಲೂರ ಹಾಗೂ ಜಯಶ್ರೀ ಹೊಸಮಠ, ಭಾಗ್ಯಜ್ಯೋತಿ ಭೋವಿ ಸನ್ಮಾನ ಕಾರ್ಯಕ್ರಮ ನೇರವೇರಿಸಿದರು. ಶಾಲೆಯ ಶಿಕ್ಷಕಿ ಮಮತಾಜ. ನಧಾಪ ವಂದಿಸಿದರು. ಶ್ರೀನಿವಾಸ್. ಅಮಾತೆಣ್ಣವರ ನಿರೂಪಿಸಿದರು.