
ನವಲಗುAದ,ಫೆ.೧೫: ಶಾಲೆಗಳಲ್ಲಿ ನಡೆಯುವ`ಸಾಂಸ್ಕöÈತಿಕ ಕಾರ್ಯಕ್ರಮ ಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಅಮರಗೋಳ ರಾಮಲಿಂಗೇಶ್ವರ ಮಠದ ಸದ್ಗುರು ಬಸವಲಿಂಗ ಸ್ವಾಮೀಜಿ ನುಡಿದರು.
ಅವರು ಸ್ಥಳೀಯ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೧೮ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮದ ಮೂಲಕ ಉನ್ನತ ಸ್ಥಾನ ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಷಣ್ಮುಖ ಗುರಿಕಾರ ಹಾಗೂ ದೇವರಾಜ ದಾಡಿಬಾವಿ ಮಾತನಾಡಿ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂದರು.
ಚAದ್ರಶೇಖರ ದಾಡಿಭಾವಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಿದವು.
ಮಾಜಿ ಪುರಸಭಾ ಅಧ್ಯಕ್ಷ ಅಶೋಕ ಮಜ್ಜಿಗುಡ್ಡ, ಶೋಭಾ ದಾಡಿಬಾವಿ, ಅಂಬುಭಟ್ಟರ ಹಂದಿಗೋಳ, ಸಿ.ಜಿ ನಾವಳ್ಳಿ, ಸಂತೋಷ ಕುಮಾರ ಸಜ್ಜನ, ಡಾ.ರಚನಾ ದಾಡಿಬಾವಿ, ಎಸ್ ವಿ ಮುದಿಗೌಡರ, ಡಾ.ಸುಕೇತ ದಾಡಿಬಾವಿ ಈರಣ್ಣ ಭಾಗವಾಡ, ಡಾ.ಸ್ವಾತಿ ದಾಡಿಬಾವಿ, ಸಂತೋಷಕುಮಾರ ಬಿ, ಸುರೇಶಗೌಡ ಪಾಟೀಲ, ಶಾಲಾ ಮುಖ್ಯೋಪಾಧ್ಯಾಪಕಿ ಪೂರ್ಣಿಮಾ ಹೆಗಡೆ ವೇದಿಕೆಯಲ್ಲಿದ್ದರು.
























