Home ಜಿಲ್ಲೆ ಬೆಂಗಳೂರು ದುಶ್ಚಟಗಳ ಮುಕ್ತಿ ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

ದುಶ್ಚಟಗಳ ಮುಕ್ತಿ ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

ಆನೇಕಲ್. ಮೇ. ೨೫- ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ರಾಷ್ಠೀಯ ಯುವ ಪ್ರಶಸ್ಥಿ ಪುರಸ್ಕೃತರಾದ ಡಾ|| ಚಿನ್ನಪ್ಪ ಚಿಕ್ಕಹಾಗಡೆರವರು ತಿಳಿಸಿದರು.


ಅವರು ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮಾಯಸಂದ್ರ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಾಲಿ ಬಾಲ್ ಪಂಧ್ಯಾವಳಿಯಲ್ಲಿ ಬಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿದ್ದು ಜೊತೆಗೆ ಮೊಬೈಲ್ ಗೆ ದಾಸರಾಗಿದ್ದು ಅದರಿಂದ ವಿಮುಕ್ತಿ ಹೊಂದಲು ಕ್ರೀಡೆ ಬಹಳ ಉಪಯೋಗವಾಗಲಿದೆ ಎಂದರು. ಈ ಹಿಂದೆ ಕ್ರೀಡೆಗಳನ್ನು ಪಟ್ಟಣದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಂಘ-ಸಂಸ್ಥೆಗಳು ಹಳ್ಳಿ ಮಟ್ಟದಲ್ಲಿಯೂ ಕ್ರೀಡೆಗಳನ್ನು ರೂಪಿಸಿ ಯುವಕರನ್ನು ಜಾಗೃತಿ ಮೂಡಿಸುವಂತಹ ಕೆಲಸವಾಗುತ್ತಿದೆ ಎಂದರು.


ಪ್ರತಿಯೊಬ್ಬರು ಸಹ ದಿನದಲ್ಲಿ ಒಂದು ಘಂಟೆಯ ಕಾಲ ವ್ಯಾಯಾಮ. ನಡಿಗೆ, ಕ್ರೀಡೆ. ಯೋಗಾಸನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯ ಬಹುದಾಗಿದೆ ಎಂದರು.


ಸರ್ಕಾರಗಳು ಸಹ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವಂತಹ ಕೆಲಸವನ್ನು ಮಾಡಬೇಕಿದೆ ಪ್ರತಿ ಹಳ್ಳಿಗೊಂದು ಆಟದ ಮೈದಾನವನ್ನು ಕಲ್ಪಿಸಿ ಕೊಟ್ಟಾಗ ಮಾತ್ರ ಆರೋಗ್ಯವಂತ ಸಮಾಜವನ್ನು ನಿರ್ಮಾಣವಾಗಲು ಸಾಧ್ಯವಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಹುಲ್ಲಳ್ಳಿ ಶ್ರೀನಿವಾಸ್. ಬಳ್ಳೂರು ವಸಂತ್. ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ ಪದ್ಮ ನಾಬ್. ಕಿತ್ತಗಾನಹಳ್ಳಿ ರಘು. ಮಾಯಸಂದ್ರ ಯುವ ಬ್ರಿಗೇಡ್ ನ ವಿನೋದ್. ರಾಮಪ್ಪ. ಮಿಡ್ಲು ಮುನಿ ಚಂದ್ರು. ಆನಂದ್. ಮಂಜು, ಸಂತೋಷ್. ನಿವೇಚನ್. ರಮೇಶ್. ಮದನ್ ಮತ್ತು ಕ್ರೀಡಾಪಟುಗಳು ಭಾಗವಹಿಸಿದ್ದರು.