ಆಳಂದನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ತರಬೇತಿ ಶಿಬಿರ

ಆಳಂದ್:ಡಿ.೧೪: ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೋದ್ಯಮದ ಮೂಲಕ ಸಮಾಜಸೇವೆ ಮಾಡುವ ಆಕಾಂಕ್ಷಿಗಳಿಗೆ ಹೊಸ ಶಕ್ತಿ ಸಿಗುವಂತೆ ಮಾಡಿದ ಒಂದು ದಿನದ ವಿಶೇಷ ತರಬೇತಿ ಶಿಬಿರ ಇಂದು ಆಳಂದ್‌ನಲ್ಲಿ ಯಶಸ್ವಿಯಾಗಿ ಜರುಗಿತು. ಆಳಂದ ಪಟ್ಟಣದಲ್ಲಿ ಸ್ಥಳೀಯ ಪತ್ರಕರ್ತರು ಹಾಗೂ ಹಾಗೂ ದಿ ಎಂಪವರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸ್ಕಿಲ್ಸ್, ಆಳಂದ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ಆಧುನಿಕ ಪತ್ರಿಕೋದ್ಯಮದ ತಂತ್ರಗಳು, ಡಿಜಿಟಲ್ ಮಾಧ್ಯಮ ನಿರ್ವಹಣೆ, ಸುದ್ದಿ ಸಂಗ್ರಹಣೆ ಮತ್ತು ವರದಿಗಾರಿಕೆಯ ಹೊಸ ಕೌಶಲ್ಯಗಳ ಕುರಿತು ಗ್ರಾಮೀಣ ಪತ್ರಕರ್ತರಿಗೆ, ಬರಹಗಾರರಿಗೆ ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳಿಗೆ ವರದಿಗಾರಿಕೆ ಒಂದು ದಿನದ ತರಬೇತಿ ಗಡಿಭಾಗದಲ್ಲಿ ತಿಹಾಸದ ದಾಖಲೆ ಬರೆಯಿತು.
ಬೀದರ್‌ನಿಂದ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಯುವ ಬರಹಗಾರರು, ಆಕಾಂಕ್ಷಿತ ಪತ್ರಕರ್ತರು ಹಾಗೂ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾದ ಮಾರ್ಗದರ್ಶನವು ಭಾಗವಹಿಸುವವರಿಗೆ ಹೊಸ ದಿಕ್ಕು ತೆರೆದಿದೆ ಎಂದು ಶಿಬಿರಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.
ಶಿಬಿರದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಣಮಂತ ಶೇರಿ ಖಜೂರಿ ಅವರು ತರಬೇತಿಯನ್ನು ನಡೆಸಿ, ಪತ್ರಕರ್ತರ್ಪಣೆಯು ಎಲ್ಲರಿಗೂ ಸಾಧ್ಯ, ಕಲಿಯುವ ಆಸಕ್ತಿ ಮಾತ್ರ ಬೇಕು, ಗ್ರಾಮೀಣ ವರದಿಗಾರಿಕೆಯಲ್ಲಿ ತಂತ್ರಜ್ಞಾನದ ಬಳಕೆಯ ಮಹತ್ವ, ಕೌಶಲ್ಯಗಳ ಅಭಿವೃದ್ಧಿ ಹಾಗೂ ಮಾಧ್ಯಮಗಳ ಘನತೆಯನ್ನು ಕಾಪಾಡುವುದರ ಕುರಿತು ವಿವರವಾದ ಚರ್ಚೆ ನಡೆಸಿದರು.
“ಪತ್ರಕರ್ತನಾಗುವುದು ಬ್ರಹ್ಮವಿದ್ಯೆಯಂತಹ ಕಠಿಣ ವಿಷಯವಲ್ಲ. ಸಾಮಾನ್ಯ ನಾಗರಿಕನು ಕೂಡ ಆಸಕ್ತಿ ಹೊಂದಿದ್ದರೆ, ಕಲಿಯುವ ಉತ್ಸಾಹವಿದ್ದರೆ ಪತ್ರಕರ್ತನಾಗಬಹುದು. ನೀವು ನಾಗರಿಕರಾಗಿ ಪತ್ರಕರ್ತರಾಗಬೇಕು ಇದು ಸಮಾಜದ ಸತ್ಯವನ್ನು ತಲುಪಿಸುವ ಸಾಧನೆ” ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸುದ್ದಿ ಸಂಗ್ರಹಣೆಗೆ ಮೊಬೈಲ್ ಆಪ್‌ಗಳು, ಸೋಶಿಯಲ್ ಮೀಡಿಯಾ ಟೂಲ್‌ಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ, ಭಾಗವಹಿಸುವವರನ್ನು ಕೌಶಲ್ಯಾಭಿವೃದ್ಧಿಗೆ ಪ್ರೇರೇಪಿಸಿದರು.
ಮಾಧ್ಯಮಗಳ ಘನತೆ ಕಾಪಾಡುವುದು ಪತ್ರಕರ್ತರ ಪ್ರಥಮ ಕರ್ತವ್ಯ ಎಂದು ಒತ್ತಿ ಹೇಳಿ, “ತಪ್ಪು ಸುದ್ದಿ ಹರಡುವ ಬದಲು ಸತ್ಯವನ್ನು ಧೈರ್ಯದಿಂದ ವರದಿ ಮಾಡಿ, ಸಮಾಜದಲ್ಲಿ ಬದಲಾವಣೆ ತರಿ” ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ್ ಅವರು ಮಾತನಾಡಿ, ಯುವ ಪ್ರತಿಭೆಗಳನ್ನು ಹೊರತರಲು ನಿರಂತರ ತರಬೇತಿಗಳ ಅಗತ್ಯ ಮನಗಂಡ ಪ್ರಥಮ ಬಾರಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು ಇದರ ಲಾಭವನ್ನು ತಟ್ಟಲಿ, ಇಂದಿನ ಸಮಾಜದಲ್ಲಿ ಬರಹಗಾರರು ಮತ್ತು ಹೋರಾಟಗಾರರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಚಿಂತಿಸುವAತೆ ಸ್ಥಿತ ನಿರ್ಮಾಣವಾಗಿದೆ “ಇಂತಹ ತರಬೇತಿಗಳು ನಿರಂತರವಾಗಿ ಎಲ್ಲಡೆ ನಡೆಯಬೇಕು. ಸೂಕ್ತ ತರಬೇತಿ ಮತ್ತು ವೇದಿಕೆಗಳು ಒದಗಿಸಿದರೆ, ಗ್ರಾಮೀಣ ಭಾಗದ ಯುವ ಪ್ರತಿಭೆಗಳು ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ಹೊರಹೊಮ್ಮಬಹುದು” ಎಂದು ಅವರು ಹೇಳಿದರು.
ಆರಂಭಿಕವಾಗಿ ಬರಹ ಮಾಹಿತಿ ಇಲಾಖೆಗಳ ಮಾಹಿತಿಯನ್ನು ಆಲಿಸುವುದು ಮತ್ತು ವರದಿಗಾರಿಕೆಯನ್ನು ಮಾಡುವ ಕುರಿತು ತಮ್ಮ ಅನುಭವಗಳನ್ನು ಹಂಚಿಕೊAಡರು. “ನಾನು ಗ್ರಾಮೀಣ ಪ್ರದೇಶದಲ್ಲಿ ಸುದ್ದಿ ಸಂಗ್ರಹಿಸುವಾಗ, ಸ್ಥಳೀಯ ಭಾಷೆಯಲ್ಲಿ ಜನರೊಂದಿಗೆ ಮಾತನಾಡಿ, ಸತ್ಯವನ್ನು ದಾಖಲಿಸಿದ್ದೇನೆ. ಇದು ಕೇವಲ ಸುದ್ದಿ ಅಲ್ಲ, ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ಕೆಲಸ” ಎಂದು ವಿವರಿಸಿ, ಯುವಕರಿಗೆ ಮನವರಿಕೆ ಮಾಡಿದರು.
ಮಾಧ್ಯಮ ಘನತೆ, ಕೌಶಲ್ಯ ರೂಡಿಸಿ ವ್ಯಕ್ತಿತ್ವ ನಿರ್ಮಾಣ ಮಾಡಿ
ದಿ ಎಂಪವರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸ್ಕಿಲ್ಸ್ನ ಸಂಸ್ಥಾಪಕ ಅಧ್ಯಕ್ಷ ರಫೀಕ್ ಇನಾಮ್ದಾರ್ ಅವರು ಮಾತನಾಡಿ, ಮಾಧ್ಯಮಗಳ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವುದು ಪತ್ರಕರ್ತರ ಕರ್ತವ್ಯ ವಾಗಿದೆ. “ರೌಡಿ, ಗೂಂಡಾಡಗಳು ಅಥವಾ ರಾಜಕಾರಣಿಗಳಂತೆ ಆಗಬೇಡಿ. ಕಾನೂನುಗಳನ್ನು ಪಾಲಿಸಿ, ಸಮಾಜದ ವಾಸ್ತವಕ್ಕಾಗಿ ಕೆಲಸ ಮಾಡಿ. ಯುವ ಪ್ರತಿಭೆಗಳು ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು” ಎಂದು ಹೇಳಿದರು.
ಸಂಘ-ಸAಸ್ಥೆಗಳ ಪ್ರಾಥಮಿಕ ವರದಿಯಿಂದ ಹಿಡಿದು ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿ, “ಇಂತಹ ಶಿಬಿರಗಳು ನಿಮಗೆ ಹೊಸ ಅವಕಾಶಗಳನ್ನು ತೆರೆಯುತ್ತವೆ. ಗ್ರಾಮೀಣ ಪತ್ರಿಕೋದ್ಯಮವನ್ನು ಬಲಪಡಿಸಿ, ಸಮುದಾಯದ ಧ್ವನಿಯಾಗಿ ನಿಲ್ಲಿ” ಎಂದು ಉತ್ತೇಜಿಸಿದರು.
ಪ್ರಮಾಣಪತ್ರ ವಿತರಣೆ: ಶಿಬಿರದ ಅಂತ್ಯದಲ್ಲಿ ಎಲ್ಲ ಭಾಗವಹಿಸುವ ಪತ್ರಕರ್ತರು, ಯುವ ಬರಹಗಾರರು ಮತ್ತು ಸಂಘ-ಸAಸ್ಥೆಗಳ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳು ವಿತರಿಸಲಾಯಿತು. ಬೀದರ್, ಆಳಂದ್ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಶಿಬಿರಾರ್ಥಿಗಳಲ್ಲಿ ಈರಯ್ಯ ಸ್ವಾಮಿ, ವೆಂಕಟೇಶ ರಾಥೋಡ್, ಪ್ರಮೋದ ರಾಥೋಡ್, ಮೊಮ್ಮದ್ ರಫೀಕ್, ಕುಪೇಂದ್ರ ಎಸ್. ಹೊಸಮನಿ, ಶೇಖರ್ ಎಸ್.ಕೆ., ಸಂಜುಕುಮಾರ್ ಆರ್. ಕಾಂಬಳೆ, ಭೀಮಾಶಂಕರ್ ಎಂ., ದಿಲೀಪ್ ಕ್ಷಿರಸಾಗರ್, ತಾನಾಜಿ ಲೌಟೆ, ಮೈಬೂಬ್ ತಂಬೋಲಿ, ಬುಧಪ್ರಿಯ ಮೂಲಭೂತಿ, ಕುಪೇಂದ್ರ ಹೊಸಮನಿ, ನರ್ಸಿಂಗ್ ಮಹೇಂದ್ರ ಕ್ಷೀರಸಾಗರ, ಹಿರಿಯ ಪತ್ರಕರ್ತ ಶರಣಬಸಪ್ಪ ವಡಗಾಂವ, ಮಹೇಶ್ ಸಾಕ್ರೆ, ಸಂಘ-ಸAಸ್ಥೆಗಳ ಪ್ರತಿನಿಧಿ ಸಲ್ಮಾನ್ ಖಾನ್, ಆಕಾಶ್ ದೇಗಾಂವ ಸೇರಿದಂತೆ ಅನೇಕರು ಭಾಗವಹಿಸಿ, ತರಬೇತಿಯ ಲಾಭ ಪಡೆದಿದ್ದರು. ಶಿಬಿರವನ್ನು ಪತ್ರಕರ್ತ ಡಾ. ಅವಿನಾಶ್ ದೇವನೂರ್ ನಿರೂಪಿಸಿ ವಂದಿಸಿದರು.
ಶಿಬಿರಾರ್ಥಿಗಳ ಅನುಭವ: ಹೊಸ ದಿಕ್ಕು ತೆರೆದುಕೊಟ್ಟಿತು ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊAಡರು. “ನಾವು ಹಲವು ರಾಜ್ಯ ಮತ್ತು ಜಿಲ್ಲಾ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿದ್ದೇವೆ, ಆದರೆ ಇದು ಅತ್ಯಂತ ಅರ್ಥಪೂರ್ಣವಾಗಿದೆ. ಹೊಸ ದಿಕ್ಕುಗಳನ್ನು ತೆರೆದುಕೊಟ್ಟು, ನಮ್ಮ ವರದಿಗಾರಿಕೆಯನ್ನು ಬದಲಿಸುವಂತೆ ಮಾಡಿದೆ” ಎಂದು ಈರಯ್ಯ ಸ್ವಾಮಿ ಜಿಡಗಾ, ಬೀದರನ ಜಿಲ್ಲೆಯಿಂದ ಆಗಮಿಸಿದ್ದ ಪತ್ರಕರ್ತ ಕುಪೇಂದ್ರ ಹೊಸಮನಿ ಅವರು ಹೇಳಿದರು.
ಗ್ರಾಮೀಣ ಪತ್ರಿಕೋದ್ಯಮವನ್ನು ಬಲಪಡಿಸುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶಿಬಿರಾರ್ಥಿಗಳು, ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಇನ್ನಷ್ಟು ಭಾಗವಹಿಸುವ ಆಸೆ ವ್ಯಕ್ತಪಡಿಸಿದರು.