Home ಜಿಲ್ಲೆ ಕಲಬುರಗಿ ಕೋರ್ಟ್ ಬಳಿ ಬೀದಿ ವ್ಯಾಪಾರಿಗಳಿಗೆ ಉಚಿತ ಕನ್ನಡಕ ವಿತರಣೆ

ಕೋರ್ಟ್ ಬಳಿ ಬೀದಿ ವ್ಯಾಪಾರಿಗಳಿಗೆ ಉಚಿತ ಕನ್ನಡಕ ವಿತರಣೆ

ಕಲಬುರಗಿ: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ಲಂ ಜನರ ಸಂಘಟನೆ ಕರ್ನಾಟಕ-ಕಲಬುರಗಿ ಜಿಲ್ಲಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಕೋರ್ಟ್ ಸಮೀಪದ ಬುದ್ಧ ಬಸವ ಅಂಬೇಡ್ಕರ್ ಕಂಪ್ಯೂಟರ್ ಬೆರಳಚ್ಚುಗಾರರ ಹಾಗೂ ಜೆರಾಕ್ಸ್ ಸಣ್ಣಪುಟ್ಟ ವ್ಯಾಪಾರಿಗಳ ಸಂಘದ ಕಚೇರಿ ಬಳಿ ಬೀದಿ ವ್ಯಾಪಾರಿಗಳಿಗೆ ಉಚಿತ ಕನ್ನಡಕ ವಿತರಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ರವಿಕಾಂತ್ ಎಸ್. ಕ್ಯಾತನಾಳ ಉದ್ಘಾಟಿಸಿದರು. ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರೀಮತಿ ತೃಪ್ತಿ ಶ್ರೀನಿವಾಸ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಲಂ ಜನರ ಸಂಘಟನೆಯ ಗೌರವ ಅಧ್ಯಕ್ಷ ಬಾಬುರಾವ್ ದಂಡಿನಕರ, ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಕಾರ್ಯದರ್ಶಿ ವಿಕಾಸ್ ಸಾವರ್ಕರ್, ಮಲ್ಲಿಕಾರ್ಜುನ ಬೈರಾಮಡ್ಗಿ, ಕವಿತಾ ಮಾಶಾಕರ್, ಅವಿನಾಶ್ ಗೌಡ, ಸುನಿಲ್ ರಾಠೋಡ್, ಬ್ರಹ್ಮಾನಂದ ಮಿಂಚಾ, ಗಣೇಶ್ ಕಾಂಬಳೆ, ವಸಂತ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೇತ್ರಾಧಿಕಾರಿಗಳಾದ ಶ್ರೀ ಧನಶಾಮ್ ಹಾಗೂ ಶ್ರೀ ಗುರುಶಾಂತ್ ಅವರು ಬೀದಿ ವ್ಯಾಪಾರಿಗಳ ನೇತ್ರ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 166 ಜನರಿಗೆ ನೇತ್ರ ತಪಾಸಣೆ ನಡೆಸಿ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಬೀದಿ ವ್ಯಾಪಾರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಇಂತಹ ಆರೋಗ್ಯ ಸೇವಾ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿವೆ ಎಂದು ಸಂಘಟಕರು ತಿಳಿಸಿದರು.