ಉಚಿತ ಕೃತಕ ಅಂಗ ಅಳತೆ ಶಿಬಿರ “ನಗುವಿನ ಅಳತೆ, ಸಾಧ್ಯತೆಗಳ ಸೃಷ್ಟಿ”

ಬೆಂಗಳೂರು, ನ.8, ಸತತ 19ನೇ ವರ್ಷ ಕರ್ನಾಟಕ ಮಾರವಾರಿ ಸಮಾಜವು ಭಗವಾನ್ ಮಹಾವೀರ್ ಜೈನ್ ವಿಕಲಾಂಗ್ ಸಹಾಯತಾ ಸಮಿತಿ (ಜೈಪುರ್ ಫೂಟ್) ಸಹಯೋಗದಲ್ಲಿ `ಉಚಿತ ಬೃಹತ್ ಕೃತಕ ಕಾಲು ಶಿಬಿರ’ ಆಯೋಜಿಸಿದೆ. ಈ ಶಿಬಿರವು ಭಗವಾನ್ ಮಹಾವೀರ್ ಜೈನ್ ವಿಕಲಾಂಗ್ ಸಹಾಯತಾ ಸಮಿತಿ (ಬಿ.ಎಂ.ವಿ.ಎಸ್.ಎಸ್.) ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ಕೃತಕ ಕೈಗಳು, ಕ್ಯಾಲಿಪರ್ ಗಳು, ಕ್ರಚಸ್ ಮತ್ತಿತರೆ ಸಂಬಂಧಿತ ಸಾಧನಗಳ ಉಚಿತ ಜೋಡಿಸುವಿಕೆ ನೀಡುತ್ತದೆ. ಅನುಭವಿ ಪ್ರಾಸ್ಥೆಟಿಕ್ ಮತ್ತು ಆರ್ಥೊಟಿಕ್ಸ್ ಪರಿಣಿತರು ರೋಗಿಗಳನ್ನು ಪರೀಕ್ಷಿಸುತ್ತಾರೆ ಮತ್ತು ವೈಯಕ್ತಿಕಗೊಳಿಸಿದ ಅರೈಕೆ ನೀಡುತ್ತಾರೆ.


ಈ ಅಳತೆಯ ಶಿಬಿರವನ್ನು ಡಿಸೆಂಬರ್ 6, 2025ರಂದು ಶನಿವಾರ ಮಹಾರಾಜ ಅಗ್ರಸೇನ್ ಭವನ್, ಅಶೋಕ ಪಿಲ್ಲರ್ ಬಳಿ, ಜಯನಗರ, ಬೆಂಗಳೂರು- 560011 ಇಲ್ಲಿ ಬೆಳಿಗ್ಗೆ 8:00ರಿಂದ ಮಧ್ಯಾಹ್ನ 3:00ರವರೆಗೆ ಆಯೋಜಿಸಲಾಗಿದೆ.


ಈ ಪ್ರಕಟಣೆ ಕುರಿತು ಕೆ.ಎಂ.ಎಸ್. ಅಧ್ಯಕ್ಷ ಪ್ರವೀಣ್ ತುಳಸಿಯಾನ್, “ಮಾನವಕುಲಕ್ಕೆ ಸೇವೆ ಒದಗಿಸಲು ಮತ್ತು ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣಕ್ಕೆ ಬದ್ಧವಾಗಿರುವ ಈ ಶಿಬಿರವು ಅಂಗವೈಕಲ್ಯ ಉಳ್ಳ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಕೃತಕ ಅಂಗಗಳು ಮತ್ತು ಅವರ ಕೊಳ್ಳಲಾಗದ ಇತರೆ ಸಾಧನಗಳನ್ನು ಒದಗಿಸುವ ನಮ್ಮ ಪ್ರಸ್ತುತದ ಪ್ರಯತ್ನಗಳ ಭಾಗವಾಗಿದೆ. ಈ ಶಿಬಿರಗಳು ಸಮುದಾಯದ ಬೆಂಬಲ ನಿರ್ಮಿಸುತ್ತವೆ, ಅರಿವು ಹೆಚ್ಚಿಸುತ್ತವೆ ಮತ್ತು ಜನರಿಗೆ ಚಲನೆ ಮರು ಒಡೆಯಲು ನೆರವಾಗುತ್ತವೆ, ಜೀವನಗಳನ್ನು ಸುಧಾರಿಸುತ್ತವೆ ಮತ್ತು ಸಾಮಾಜಿಕ ಸಕ್ರಿಯತೆ ನೀಡುತ್ತವೆ. ಈ ಉಪಕ್ರಮವು ಉಚಿತ ವೈದ್ಯಕೀಯ ಪರೀಕ್ಷೆಗಳು, ಫಿಟ್ಟಿಂಗ್ ಗಳು ಮತ್ತು ಜೀವನದ ಗುಣಮಟ್ಟ ಹೆಚ್ಚಿಸಲು ದೀರ್ಘಾವಧಿ ಪರಿಣಾಮ ಉಂಟು ಮಾಡಲು ಪ್ರಸ್ತುತದ ಆರೈಕೆಯ ಭಾಗವಾಗಿವೆ. ಕರ್ನಾಟಕದ ಮತ್ತು ಸುತ್ತಮುತ್ತಲಿನ ರಾಜ್ಯಗಳ ಜನರಿಗೆ ಈ ಅವಕಾಶ ಪಡೆದುಕೊಳ್ಳಲು ಸ್ವಾಗತ” ಎಂದರು.


ಕರ್ನಾಟಕ ಮಾರವಾರಿ ಸಮಾಜದ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀ ಬಿಮಲ್ ಕುಮಾರ್ ಸರೋಗಿ, “ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬಾಧಿತರಾಗಿದ್ದೇವೆ ಮತ್ತು ನಮ್ಮ ಸಾಮರ್ಥ್ಯ ಮೀರಿ ಇತರರಿಗೆ ನೆರವಾಗಲು ಶ್ರಮಿಸಬೇಕು. ಕೆಎಂಎಸ್ ದುರ್ಬಲರಿಗೆ ಚಲನೆ ನೀಡಲು ಮತ್ತು ಘನತೆ ತರಲು ಅತ್ಯುತ್ತಮ ಗುಣಮಟ್ಟದ,

ದೀರ್ಘಬಾಳಿಕೆಯ ಕೃತಕ ಕಾಲುಗಳು, ಇತರೆ ಸಾಧನಗಳು ಮತ್ತು ಸಲಕರಣೆಗಳನ್ನು ಒದಗಿಸುವ ಸಾಮಾಜಿಕ ಧ್ಯೇಯ ಮತ್ತು ಬದ್ಧತೆ ಹೊಂದಿದೆ. ಉತ್ತಮ ಗುಣಮಟ್ಟದ, ದೀರ್ಘಬಾಳಿಕೆಯ ಕೃತಕ ಅಂಗಗಳು ಮತ್ತು ಇತರೆ ಸಾಧನಗಳಿಂದ ನಾವು ಅವರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿ ಹೊಂದಿದ್ದೇವೆ” ಎಂದರು.


ಈ ಶಿಬಿರವು ಅಂಗ ಕಳೆದುಕೊಂಡ, ಕಾಲು ಮತ್ತು ಕೈಗಳನ್ನು ಕಳೆದುಕೊಂಡ ಮತ್ತು ಇತರೆ ಚಲನೆಯ ಸಮಸ್ಯೆಯುಳ್ಳ ವ್ಯಕ್ತಿಗಳಿಗೆ ಮುಕ್ತವಾಗಿದೆ.
ಆಸಕ್ತ ವ್ಯಕ್ತಿಗಳು ಸಂದೀಪ್ ಪೊಡ್ಡಾರ್: 8792288404 ಮತ್ತು ರಿಂಕೇಶ್ ಬರೊಲಿಯಾ: 9886521885 ಅವರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.


ತಂಡದ ಸದಸ್ಯರು ನೋಂದಣಿ ಪ್ರಕ್ರಿಯೆಗೆ ಮಾರ್ಗದರ್ಶನ ನೀಡುತ್ತಾರೆ.