Home ಜಿಲ್ಲೆ ಕಲಬುರಗಿ ಆರ್.ಜೆ ಕಾಲೇಜಿನಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ

ಆರ್.ಜೆ ಕಾಲೇಜಿನಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ:ಜು.12: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ (ಓSS) ಘಟಕದ ಸಂಯುಕ್ತಾಶ್ರಯದಲ್ಲಿ ದಿನಾಂಕ: 11-07-2026 ಶನಿವಾರ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 4:00 ಯವರೆಗೆ ಹೆಚ್.ಕೆ.ಇ ಸಂಸ್ಥೆಯ ಅಡಿಯಲ್ಲಿರುವ ಬಸವೇಶ್ವರ ಬೋಧನಾ ಮತ್ತು ಸಾರ್ವಜನಕ ಆಸ್ಪತ್ರೆ ಹಾಗೂ ಎಸ್. ನಿಜಲಿಂಗಪ್ಪ ಡೆಂಟಲ್ ಆಸ್ಪತ್ರೆಯ ಸಹಯೋಗದಲ್ಲಿ ನುರಿತ ವೈಧ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಭಿರವನ್ನು ಏರ್ಪಡಿಸಲಾಗಿತ್ತು.

ಈ ಶಿಬಿರದಲ್ಲಿ ಜನರಲ್ ಮೆಡಿಸನ್ (ಬಿಪಿ, ಶುಗರ್ ಹಾಗೂ ಥೈರಾಯಿಡ್), ಒ.ಬಿ.ಜಿ, ಇ.ಎನ್.ಟಿ, ಡರ್ಮಟಾಲೊಜಿ, ಕಮ್ಯುನಿಟಿ ಮೆಡಿಸನ್, ಡೆಂಟಿಸ್ಟ್ರೀ, ಸ್ಕಿನ್ & ಹೇರ್ ಸಂರಕ್ಷಣೆ, ನೇತ್ರ ತಪಾಸಣೆಯನ್ನು 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂಧಿ ಬಳಗ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು.

ಈ ತಪಾಸಣೆ ಶಿಬಿರದ ಕನಸನ್ನು ಕಂಡಿರುವ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಶಶೀಲ ಜಿ. ನಮೋಶಿ, ಅಧ್ಯಕ್ಷರು ಹೆಚ್.ಕೆ.ಇ. ಸಂಸ್ಥೆ ಕಲಬುರಗಿ ಇವರು ಕಲ್ಯಾಣ ಕರ್ನಾಟಕ ಭಾಗದ ವಿವಿಧ ಶಾಲಾ ಹಾಗೂ ಕಾಲೇಜುಗಳಲ್ಲಿ ಮಕ್ಕಳ ಹಾಗೂ ಶಿಕ್ಷಕ ವರ್ಗಗಳ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾದಂತಹ ಆರೋಗ್ಯ ತಪಾಸಣೆಯನ್ನು ಕಲಬುರಗಿ ಜಿಲ್ಲೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.

ಕಾಲೇಜಿನ ಪ್ರಾಚಾರ್ಯರಾದ ಡಾ. ಭುರ್ಲಿ ಪ್ರಹ್ಲಾದ, ಆಡಳಿತಾಧಿಕಾರಿಗಳಾದ ಶ್ರೀಮತಿ. ಜ್ಯೋತಿ ಭುರ್ಲಿ, ಉಪ ಪ್ರಾಚಾರ್ಯರಾದ ಕೇದಾರ ದೀಕ್ಷಿತ್, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ ಚವ್ಹಾಣ ಹಾಗೂ ಸರ್ವ ಉಪನ್ಯಾಸಕ, ಸಿಬ್ಬಂಧಿ ಬಳಗದ ವತಿಯಿಂದ ಸರ್ವ ವೈಧ್ಯ ತಂಡಕ್ಕೆ ಸನ್ಮಾನಿಸಲಾಯಿತು.