
ಕೋಲಾರ,ನ.೧೯- ಪ್ರಸಕ್ತ ಸಾಲಿನ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು,
ಶಿಬಿರದಲ್ಲಿ ಜಿಲ್ಲಾ ಎಸ್‌ಎಸ್‌ಕೆ ಸಮನ್ವಯ ಅಧಿಕಾರಿ ರಾಜೇಶ್ವರಿ ಮೇಡಂ ರವರು ಭಾಗವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ರಾಧಮ್ಮ ರವರ ಸಹಕಾರದೊಂದಿಗೆ, ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಶಿಬಿರದಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯ ಡಾ. ಶರ್ಮಿಳ ಎಂ. ಜಿಲ್ಲಾ ಆರ್‌ಬಿಎಸ್‌ಕೆ ಡಾ ಹೀನ ಕೌಸರ್ ಹಾಗೂ ತಂಡದವರು, ಸ್ಥಳೀಯ ಸಂಘ ಸಂಸ್ಥೆಗಳು, ಸುಪ್ರೀಂ ಸಂಸ್ಥಾಪಕ ಅಧ್ಯಕ್ಷ, ಸುಪ್ರೀಂ ವಿಕಲಚೇತನ ಸೇವಾ ಸಂಸ್ಥೆ ಕೋಲಾರ, ಶಾಲಾ ಶಿಕ್ಷಕರು ಪೋಷಕರು ಶಾಲಾ ವಿಕಲಚೇತನ ಮಕ್ಕಳು ಹಾಜರಾಗಿದ್ದರು, ಐವತ್ನಾಲ್ಕು ವಿಕಲಚೇತನ ಮಕ್ಕಳಿಗೆ ಸಾಧನಾ ಸಲಕರಣೆಗಳಿಗೆ ಆಯ್ಕೆ ಮಾಡಲಾಯಿತು.ಅಂತಗಂಗಾ ವಿದ್ಯಾ ಸಂಸ್ಥೆಯ ಡಾ.ಕೆಎಸ್ ಶಂಕರ್ ರವರಿಂದ ಲಘು ಉಪಹಾರ ಶಿಬಿರದ ಎಲ್ಲಾ ವಿಕಲಚೇತನ ಮಕ್ಕಳಿಗೆ ವ್ಯವಸ್ಥೆ ಮಾಡಲಾಯಿತು.


























