ಪ್ರವಾಹ ಸಂಕಷ್ಟಕ್ಕೆ ಸಿಲುಕಿ ಸಂಪೂರ್ಣ ಮುಳುಗಡೆಯಾಗಿದ್ದ ಕಡಬೂರಲ್ಲಿ ಉಚಿತ ವೈದ್ಯಕೀಯ ಶಿಬಿರ

ವಾಡಿ :ಅ.19:ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮದಲ್ಲಿ ಉಚಿತ ವೈದ್ಯಕೀಯ ಶಿಬರ ನಡೆಯಿತು. ಅಖಿಲ ಭಾರತ ರ?ತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಹಾಗೂ ಮೇಡಿಕಲ್ ಸರ್ವಿಸ್ ಸೆಂಟರ್ (ಎಂಎಸ್ ಸಿ) ಸಂಘಟನೆಗಳು ಜಂಟಿಯಾಗಿ ಶನಿವಾರ ಗ್ರಾಮದ ಗ್ರಂಥಾಲಯ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಕಡಬೂರ ಗ್ರಾಮದ ಬಹುತೇಕ ಜನರು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಂಡರು. ಪ್ರವಾಹ ತಗ್ಗಿದ ನಂತರ ಎದುರಾದ ಮಲೇರಿಯಾ, ಚರ್ಮರೋಗ, ವಾಂತಿ ಬೇಧಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಂದ ಬಳಲಿದ ಮಕ್ಕಳು, ಮಹಿಳೆಯರು, ವೃದ್ಧರು ವ?ದ್ಯರ ಸಲಹೆ ಪಡೆದು ಮಾತ್ರೆ ಔಷಧಗಳನ್ನು ಪಡೆದುಕೊಂಡರು.

ಈ ವೇಳೆ ಮಾತನಾಡಿದ ಮೇಡಿಕಲ್ ಸರ್ವಿಸ್ ಸೆಂಟರ್ ನ ಡಾ.ಸೀಮಾ ದೇಶಪಾಂಡೆ, ಭೀಮಾನದಿ ಮತ್ತು ಕಾಗಿಣಾ ನದಿಗಳ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಹಲವು ನದಿ ದಂಡೆಗಳ ಗ್ರಾಮಗಳು ಜಲಪ್ರಳಯಕ್ಕೆ ತುತ್ತಾಗಿವೆ. ಕಡಬೂರ, ಕುಂದನೂರ, ಚಾಮನೂರ, ಹೊನಗುಂಟಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನರು ರೋಗ ರುಜಿನುಗಳಿಂದ ಬಳಲುತ್ತಿದ್ದಾರೆ. ಪರಿಣಾಮ ಜನರ ಆರೋಗ್ಯ ಕಾಳಜಿಯಿಂದ ಪ್ರವಾಹ ಪೀಡಿತ ಗ್ರಾಮಗಳಲ್ಲಿ ವ?ದ್ಯಕೀಯ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ವ?ದ್ಯರಾದ ಡಾ. ಸುಧೇಂದ್ರ ಎನ್, ಡಾ.ದಿವ್ಯಾ. ಪಿ, ಡಾ. ವರ್ಷಾ ಆರ್. ಬಿ, ಡಾ. ಉಪೇಂದ್ರ.ಎನ್, ಡಾ. ಸೀಮಾ ದೇಶಪಾಂಡೆ, ಡಾ. ಎಸ್. ಕೆ. ಶರತಕುಮಾರ, ಆರೋಗ್ಯ ಕ್ಷೇತ್ರಾಧಿಕಾರಿ ಮಂಜುಳಾ ಬುಳ್ಳಾ, ಮುಖಂಡರಾದ ಶ್ರೀಶ?ಲ್ ಕೆಂಚಗುಂಡಿ, ವೀರಭದ್ರಪ್ಪ ಆರ್. ಕೆ, ವೆಂಕಟೇಶ ದೇವದುರ್ಗ, ವಿಠ್ಠಲ್ ರಾಠೋಡ, ಶರಣು ಹೇರೂರ, ಮಹೇಶ ನಾಡಗೌಡ, ಹಣಮಂತ ಚವ್ಹಾಣ, ಗೌತಮ ಪರ್ತೂರಕರ, ಗೋಧಾವರಿ ಕಾಂಬಳೆ, ಬಾಸುಮಿಯ್ಯಾ ಹೊಸಮನಿ, ಸಿದ್ದಪ್ಪ, ಗೊವಿಂದ ಯಳವಾರ, ರಾಜು ಒಡೆಯರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಗ್ರಾಮದ ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು.