600 ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣೆ

ಬೀದರ:ಜ.5:ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 600 ವಿದ್ಯಾರ್ಥಿಗಳ ತಪಾಸಣೆ ಮಾಡಲಾಯಿತು.
ಕ್ಲಬ್ ಅಧ್ಯಕ್ಷರೂ ಆದ ಡಾ. ನಾಗೇಶ ಪಾಟೀಲ, ಡಾ. ಸುಪ್ರಿಯಾ, ಡಾ. ಶಿವಾನಿ ದಂತ ತಪಾಸಣೆ, ಡಾ. ವಿನಯಕುಮಾರ ಬಿಯಾನಿ ಚರ್ಮ ರೋಗ ತಪಾಸಣೆ ನಡೆಸಿದರು.
ಆರೋಗ್ಯವೇ ಮನುಷ್ಯನ ದೊಡ್ಡ ಸಂಪತ್ತು. ಹೀಗಾಗಿ ಕ್ಲಬ್‍ನಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಾಗೂ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ. ನಾಗೇಶ ಪಾಟೀಲ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮ ಹಾಗೂ ಮನೋ ರೋಗ ನಿವಾರಣೆ ಕುರಿತು ಡಾ. ಶ್ವೇತಾ ಕುಣಕೇರಿ ಹಾಗೂ ಸ್ತ್ರೀ ರೋಗಗಳ ಕುರಿತು ಡಾ. ಶಾರದಾ ಗುದಗೆ ಉಪನ್ಯಾಸ ನೀಡಿದರು.
500 ವಿದ್ಯಾರ್ಥಿಗಳಿಗೆ ಡೆಂಟಲ್ ಕಿಟ್ ಹಾಗೂ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು. ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ, ರೋಟರಿ ಕ್ಲಬ್ ಕಾರ್ಯದರ್ಶಿ ರಾಜಕುಮಾರ ಅಳ್ಳೆ, ಜಂಟಿ ಕಾರ್ಯದರ್ಶಿ ಸತೀಶ್ ಸ್ವಾಮಿ, ಬಸವರಾಜ ಮಡಕಿ, ನಿತಿನ್ ಕರ್ಪೂರ, ನಿತೇಶ ಬಿರಾದಾರ ಮತ್ತಿತರರು ಇದ್ದರು.