ಚಾಮುಂಡೇಶ್ವರಿ ಕಟ್ಟಡ ಕಾರ್ಮಿಕರ ಸಂಘದಿಂದ ಉಚಿತ ಆರೋಗ್ಯ ತಪಾಸಾಣೆ

ಬೆಂಗಳೂರು,ಜ.24-ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿನ ಚಾಮುಂಡೇಶ್ವರಿ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದವತಿಯಿಂದ ಉಚಿತ ಆರೋಗ್ಯ ತಪಾಸಾಣೆಯನ್ನು ಏರ್ಪಡಿಸಲಾಯಿತು. ಕಣ್ಣಿನ ಚಿಕಿತ್ಸೆ, ಉಚಿತ ವೈದ್ಯರ ಸಲಹೆ, ಮೂಳೆ ತಜ್ಞರು, ಚರ್ಮರೋಗ ತಪಾಸಣೆ, ಸ್ರೀರೋಗತಜ್ಞರು ಮತ್ತು ಉಚಿತ ಔಷಧಿ ವಿತರಣೆ ಮಾಡಲಾಗಿದೆ.

ಈ ವೇಳೆ ಮಾಜಿ ಕಾರ್ಪೋರೇಟ್ ಅಬ್ದುಲ್ ವಾಜಿದ್ ಹಾಗೂ ಸಂಘದ ಅಧ್ಯಕ್ಷ ಮುರುಗನ್ ಸೇರಿದಂತೆ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.