
ಬೀದರ್: ಮೇ.29:ಹುಮನಾಬಾದ್ ಪಟ್ಟಣದ ಹಣಕುಣಿ ರಸ್ತೆಯಲ್ಲಿ ಇರುವ ಮಾಣಿಕಪ್ರಭು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ನಡೆದ ಶಿಬಿರದಲ್ಲಿ 68 ಜನರ ಉಚಿತ ನೇತ್ರ ತಪಾಸಣೆ ನಡೆಸಲಾಯಿತು.
ಕಣ್ಣಿನಲ್ಲಿ ಪೆÇರೆ ಇರುವ 25 ಜನರಿಗೆ ಅಗತ್ಯ ಚಿಕಿತ್ಸೆಗೆ ಸಲಹೆ ನೀಡಲಾಯಿತು. 28 ಜನರಿಗೆ ಕನ್ನಡ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಉಲ್ಲಾಸ ಲೊಡ್ಡ, ಧನ್ವಂತರಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಸಂತೋಷಕುಮಾರ ಅಣ್ಣಪ್ಪನವರ್ ಮತ್ತಿತರರು ಇದ್ದರು.
ಯುತ್ ಫಾರ್ ಸೇವಾ, ಧನ್ವಂತರಿ ಎಜುಕೇಷನ್ ಟ್ರಸ್ಟ್, ಆದಿತ್ಯ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್, ಬೀದರನ ಇನ್ಫಿನಿಟಿ ವಿಷನ್ ಐ ಕೇರ್ ಆಸ್ಪತ್ರೆ ಹಾಗೂ ಮಾಣಿಕಪ್ರಭು ಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.