ಬೀದರ್: ಅ.12:ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಇಲ್ಲಿಯ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಸೋಮವಾರ ಸಾರ್ವಜನಿಕರಿಗೆ ಬಿಲ್ವಪತ್ರಿ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠ, ನೌಬಾದನ ಜ್ಞಾನಶಿವಯೋಗಾಶ್ರಮ, ಈಶ್ವರಿ ಮಹಿಳಾ ಮಂಡಳ ಹಾಗೂ ಆರತಿ ವಿಕಾಸ ಮಹಿಳಾ ಸಮಿತಿಯ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಸಸಿ ವಿತರಿಸಿದರು.
ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಾತೆ ಕರುಣಾದೇವಿ ಅವರು ಅಕ್ಕ ಮಹಾದೇವಿ ಪ್ರತಿರೂಪವಾಗಿದ್ದಾರೆ. ಸಮಾಜೋಧಾರ್ಮಿಕ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಮಾತೆ ಕರುಣಾದೇವಿಯವರ ಹೆಸರಲ್ಲಿ ಹಮ್ಮಿಕೊಂಡಿರುವ ಸಂಕಲ್ಪ ಅಭಿಯಾನವನ್ನು ಭಕ್ತರು ಯಶಸ್ವಿಗೊಳಿಸಿ ಅವರನ್ನು ಗೌರವಿಸಬೇಕು ಎಂದು ಜ್ಯೋತಿ ಪ್ರಭುಲಿಂಗ ಸ್ವಾಮಿ ಹೇಳಿದರು.
ನಗರದ ಪ್ರತಿ ಬಡಾವಣೆಯಲ್ಲೂ ಅಭಿಯಾನ ಜರುಗಲಿದೆ. ಅಭಿಯಾನ ಅಂಗವಾಗಿ ಶಾಲಾ, ಕಾಲೇಜು, ಧಾರ್ಮಿಕ ಕೇಂದ್ರ, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗುವುದು. ಬಿಲ್ವಪತ್ರಿ ಸೇರಿ ವಿವಿಧ ಸಸಿಗಳನ್ನು ವಿತರಿಸಲಾಗುವುದು ಎಂದು ಕಾವೇರಿ ಸ್ವಾಮಿ ತಿಳಿಸಿದರು.
ರಾಜೇಶ್ವರಿ ಸ್ವಾಮಿ, ಸರಸ್ವತಿ ಸ್ವಾಮಿ, ಶಾಂತಾ, ಸ್ವಪ್ನ ಸ್ವಾಮಿ, ಘಾಳೆಮ್ಮ ಸ್ವಾಮಿ, ಕವಿತಾ ಸ್ವಾಮಿ, ಅರುಣಾ ಸ್ವಾಮಿ, ರೇಣುಕಾ ಸ್ವಾಮಿ ಮತ್ತಿತರರು ಇದ್ದರು.






















