
ಕಲಬುರಗಿ, ಜು.24: ‘ಮಿಷನ್ ಸ್ಮೈಲ್’ ಉಚಿತ ಸೇವಾ ಶಿಬಿರಕ್ಕಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ನುರಿತ ವೈದ್ಯಕೀಯ ತಂಡ ಮತ್ತು ಸ್ವಯಂ ಸೇವಕರು ಮಹತ್ತರವಾದ ಚಾಲನೆ ಸಿಕ್ಕಿರುವುದರಿಂದ ಮುಂದಿನ ಮೂರೂವರೆ ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮುಗ್ಧ ಮಕ್ಕಳ ಸೀಳುತುಟಿ ಸಮಸ್ಯೆ ನಿವಾರಿಸಿ, ಅವರ ಕುಟುಂಬಗಳಲ್ಲಿ ಹೊಸ ಭರವಸೆಯ ನಗು ಮೂಡಿಸುವದಾಗಿ ಮಿಷನ್ ಸ್ಮೈಲ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕಾನ್ರಾಡ್ ಜಿ. ಡೆನ್ನಿಸ್ ಹೇಳಿದರು.
ಗುರುವಾರ ನಗರದ ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಆಡಿಟೋರಿಯಂ ಸಬಾಂಗಣದಲ್ಲಿ ಆಯೋಜಿಸಿದ ಉಚಿತ ಸಮಗ್ರ ಸೀಳು ತುಟಿ ಹಾಗೂ ಸೀಳು ಅಂಗಳಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಿಷನ್ ಸ್ಮೈಲ್ ಒಂದು ನೋಂದಾಯಿತ ವೈದ್ಯಕೀಯ ದತ್ತಿ ಸಂಸ್ಥೆಯಾಗಿದ್ದು, 2003 ರಿಂದ ಸೀಳುತುಟಿ,ಸೀಳು ಅಂಗುಳಿ ಹಾಗೂ ಇತರೆ ಉಚಿತ ಶಸ್ತ್ರಚಿಕಿತ್ಸೆಯನ್ನು ಅಂದರೆ 23 ವರ್ಷಗಳಿಂದ ನಿರಂತರವಾಗಿ ಸಾಗಿಬಂದಿದೆ.
ಈ ‘ಮಿಷನ್ ಸ್ಮೈಲ್’ ಅಭಿಯಾನದ ಮೂಲಕ ಇದುವರೆಗೆ ಒಟ್ಟು 77,000ಕ್ಕೂ ಹೆಚ್ಚು ಮಕ್ಕಳ ತಪಾಸಣೆ ನಡೆಸಲಾಗಿದ್ದು, 52,500ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಒದಗಿಸಲಾಗಿದೆ.ಈ ಸಂಸ್ಥೆಯ ನಿಸ್ವಾರ್ಥ ಸೇವೆ ಹಾಗೂ ಸತ್ಕರ್ಮದ ಫಲವಾಗಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ಮತ್ತು ಹೊಸ ಜೀವನ ಲಭಿಸುವಂತಾಗಲಿ ಎಂದರು.
ಮುತ್ತೂಟ್ ಪಾಪಚನ್ ಗ್ರೂಪ್( ಅSಖ ) ಮುಖ್ಯಸ್ಥ ಪ್ರಶಾಂತಕುಮಾರ : ಮುತ್ತೂಟ್ ಸಮೂಹ ಸಂಸ್ಥೆ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುತ್ತಿದೆ. ಈ ಮುತೂಟ್ ಮತ್ತು ‘ಮಿಷನ್ ಸ್ಮೈಲ್’ ಸಹಭಾಗಿತ್ವದಲ್ಲಿ ಈಗ 12ನೇ ವರ್ಷದ ಸಂಭ್ರಮವಾಗಿದ್ದು, ಇವುಗಳ ಸಂಯುಕ್ತಾಶ್ರಯದಲ್ಲಿ ಇದುವರೆಗೆ ಒಟ್ಟು 3,747 ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಈ ಆರ್ಥಿಕ ವರ್ಷದಲ್ಲಿ ಇದು 2ನೇ ಶಿಬಿರವಾಗಿದ್ದು ದೇಶದ ವಿವಿಧ ರಾಜ್ಯಗಳಲ್ಲಿ ಇನ್ನು 6 ಶಿಬಿರಗಳನ್ನು ನಡೆಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಈ ಸಿ.ಎಸ್.ಆರ್ ಚಟುವಟಿಕೆಗಳಿಗೆ ಮುತೂಟ್ ಫಿನ್ಕಾರ್ಪ್ ಲಿಮಿಟೆಡ್ (ಚಿನ್ನದ ಸಾಲ), ಮೈಕ್ರೋ ಫೈನಾನ್ಸ್, ಹೌಸಿಂಗ್ ಫೈನಾನ್ಸ್, ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ (ವಾಹನ ಸಾಲ), ರಿಸ್ಕ್ ಇನ್ಶೂರೆನ್ಸ್, ಎಕ್ಸಿಮ್ ಮತ್ತು ಮುತೂಟ್ ಚಿಟ್ಸ್ ಸೇರಿದಂತೆ ಒಟ್ಟು 7 ಹಣಕಾಸು ಸಂಸ್ಥೆಗಳು ಬೆಂಬಲ ನೀಡುತ್ತಿವೆ. ಎಲ್ಲಾ ಶಾಖಾ ಸದಸ್ಯರ ಈ ಶ್ರಮ ಮತ್ತು ಸೇವೆ ನಿಜಕ್ಕೂ ಅಭಿನಂದನೀಯವಾಗಿದೆ ಎಂದು ಶ್ಲಾಘೀಸಿದರು.
ಜಿಮ್ಸ್‍ನ ಹಿರಿಯ ವೈದ್ಯಾಧಿಕಾರಿಗಳು ಡಾ. ಶಿವಕುಮಾರ್ ದೇಶಮುಖ್ ಮಾತಾನಾಡಿ ಹುಟ್ಟಿನಿಂದಲೇ ಸೀಳುತುಟಿ ಮತ್ತು ಸೀಳುಅಂಗುಳು ಮೇಲಿನ ತುಟಿ ಹಾಗೂ ಮಸಡಿನ ಮೇಲಿನ ರಂಧ್ರ ಅಥವಾ ನ್ಯೂನತೆ) ಇರುವ ಸಣ್ಣ ಮಕ್ಕಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಉಚಿತ ಮತ್ತು ಸುರಕ್ಷಿತವಾದ ಸೇವೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಮುಂದಿನ ಮೂರು ದಿನಗಳಲ್ಲಿ ನೋಂದಾಯಿಸಿಕೊಂಡಿರುವ 50 ರಿಂದ 80 ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲೇ ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುವುದು. ಇದು ವೈದ್ಯರ ಸೇವಾ ಭಾವದಿಂದ ಮಾಡುತ್ತಿರುವ ಕಾರ್ಯ ಹಾಗೂ ಕ್ಯಾಂಪ್ ಸುಗಮವಾಗಿ ನಡೆಯಲು ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮತ್ತು ತಾಂತ್ರಿಕ ಸಿದ್ಧತೆಗಳು ಮಾಡಲಾಗಿದೆ.
ಓರಲ್ ಸರ್ಜರಿ ಪಿಜಿ (ಔಡಿಚಿಟ Suಡಿgeಡಿಥಿ Pಉs) ವಿದ್ಯಾರ್ಥಿಗಳು ಆಸ್ಪತ್ರೆಯ ಅರಿವಳಿಕೆ (ಂಟಿesಣhesiಚಿ) ಮತ್ತು ಸರ್ಜರಿ ವಿಭಾಗದ ಸಹೋದ್ಯೋಗಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಿರಿಯ, ಅನುಭವಿ ತಜ್ಞರು ಕಾರ್ಯನಿರ್ವಹಿಸುವ ವಿಧಾನವನ್ನು ಹತ್ತಿರದಿಂದ ನೋಡುವ ಮತ್ತು ಕಲಿಯುವ ಉತ್ತಮ ಅವಕಾಶವಾಗಿದೆ.ಮುಂದಿನ 3 ದಿನಗಳ ಕಾಲ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು, ಬರುವ ರೋಗಿಗಳು ಹಾಗೂ ಅವರ ಕುಟುಂಬದವರು ಮುಖದಲ್ಲಿ ನಗುವಿನೊಂದಿಗೆ ಮನೆಗೆ ಮರಳುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಿಷನ್ ಸ್ಮೈಲ್ ಟ್ರಸ್ಟಿ ಹಾಗೂ ಹಿರಿಯ ಅರಿವಳಿಕೆ ತಜ್ಞರಾದ ಡಾ. ರಾಮಕುಮಾರ್ ವೆಂಕಟೇಶ್ವರನ್, ಜಿಮ್ಸ್ ನಿರ್ದೇಶಕರಾದ ಡಾ. ಉಮೇಶ್ ಎಸ್.ಆರ್, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯಕೀಯ ಅಧೀಕ್ಷಕರು ಹಾಗೂ ಮುಖ್ಯಸ್ಥರಾದ ಡಾ. ಶಿವಕುಮಾರ್ ಸಿ.ಆರ್, ಮಕ್ಕಳ ವಿಭಾಗದ ಉಪ ವೈದ್ಯಕೀಯ ಅಧೀಕ್ಷಕರು ಹಾಗೂ ಮುಖ್ಯಸ್ಥರಾದ ಡಾ. ರೇವನಸಿದ್ದಪ್ಪ ಭೋಸಗಿ, ಅರಿವಳಿಕೆ (ಅನಸ್ಥಿಷಿಯಾಲಜಿ) ವಿಭಾಗದ ಉಪ ವೈದ್ಯಕೀಯ ಅಧೀಕ್ಷಕರು, ಸೂಪರ್ ಸ್ಪೆμÁಲಿಟಿ ಆಸ್ಪತ್ರೆ ಹಾಗೂ ಮುಖ್ಯಸ್ಥರಾದ ಡಾ. ಜಗದೀಶ್ ಎಂ.ಬಿ, ಮುಂತಾದವರು ಉಪಸ್ಥಿತರಿದ್ದರು.































