ಭಕ್ತಿಯ ಹೆಸರಲ್ಲೂ ವಂಚನೆ :ಪ್ರಯಾಗ್‍ರಾಜ್‍ಗೆ ಹೆಲಿಕ್ಯಾಪ್ಟರ್ ಪ್ರಯಾಣ ಹೆಸರಿನಲ್ಲಿ ವಂಚನೆ : 4.8 ಲಕ್ಷ ರೂ. ವಶ

ವಿಜಯಪುರ, ಜ. 22: ಭಕ್ತಿಯ ಪ್ರತೀಕವಾದ ಪುಣ್ಯಸ್ನಾನದ ಪವಿತ್ರ ಸ್ಥಳ ಪ್ರಯಾಗ್‍ರಾಜ್‍ಗೆ ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಹೋಗುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ ಪ್ರಕರಣವನ್ನು ಬೇಧಿಸಿ, ಈ ಪ್ರಕರಣದಲ್ಲಿ ದೂರುದಾರರ ಸಂಪೂರ್ಣ ಹಣವನ್ನು ಮರಳಿ ತರಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಕರಣದ ಕುರಿತು ವಿವರಣೆ ನೀಡಿದ ಅವರು, ಪ್ರಯಾಗ್ ರಾಜ್‍ನಲ್ಲಿ ಕುಂಭ ಮೇಳ ನಡೆದ ವೇಳೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಕರೆದುಕೊಂಡು ಹೋಗಿ ವೀಕ್ಷಣೆ ಮಾಡಿಸುವುದಾಗಿ ಹೇಳಿ ಅತ್ತ ಹೆಲಿಕ್ಯಾಪ್ಟರ್ ಸೇವೆಯನ್ನೂ ಕೊಡದೇ ಇತ್ತ ಹಣವನ್ನೂ ಸಹ ಮರಳಿಸಿರಲಿಲ್ಲ, ವಿಮಾನದ ಟಿಕೇಟ್ ಎಂದು ಹೇಳಿ 1.8 ಲಕ್ಷ ರೂ., ಉಳಿದುಕೊಳ್ಳುವ ವ್ಯವಸ್ಥೆಗೆ 1.21 ಲಕ್ಷ ರೂ. ಸೇರಿದಂತೆ 4.8 ಲಕ್ಷ ರೂ. ವಂಚನೆ ಮಾಡಿದ್ದರು. ಈ ದೂರು ದಾಖಲಿಸಿಕೊಂಡಿದ್ದ ಪೆÇಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ವಂಚನೆ ಮಾಡಿದ ಆರೋಪಿಗಳ ಬ್ಯಾಂಕ್ ಖಾತೆ ಫ್ರೀಜ್ ಮಾಡಿ 4.08 ಲಕ್ಷ ರೂ.ಗಳನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದು ವಿವರಿಸಿದರು.

ಡೆಲಿವರಿ ಫ್ರಾಂಚೈಸಿ ಹೆಸರಲ್ಲೂ ವಂಚನೆ

ಇ-ಕಾಮ್ ಡೆಲಿವರಿ ಪ್ರಾಂಚೈಸಿ* ಕೊಡುವುದಾಗಿ ಹೇಳಿ ವಿಜಯಪುರ ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಹಾಗೂ ಅವರ ಪರಿಚಯದ 9ಜನರ ಕಡೆಯಿಂದ 58 ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಾಂಚೈಸಿ ಕೊಡದೇ ವಂಚನೆ ಮಾಡಿದ್ದರು. ಈ ಪ್ರಕರಣದಲ್ಲಿ 10 ಲಕ್ಷ ರೂ.ಗಳನ್ನು ದೂರು ಹಾಗೂ ಸಾಕ್ಷಿದಾರರಿಗೆ ಮರಳಿಸಲಾಗಿದ್ದು, ಉಳಿದ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12 ಲಕ್ಷ ರೂ.ಗಳನ್ನು ಫ್ರೀಜ್ ಮಾಡಿಸಿ ನ್ಯಾಯಾಲಯದ ಆದೇಶ ಪಡೆದುಕೊಂಡಿದ್ದು, ಬ್ಯಾಂಕಿನಿಂದ ಸಾಕ್ಷಿದಾರರಿಗೆ ರಿಫಂಡ್ ಮಾಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.