
ಹುಮನಾಬಾದ್:ಮಾಲಿನ್ಯ ನಿಯಂತ್ರಣ ನಿಯಮಗಳ ಉಲ್ಲಂಘನೆ, ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಗುರುವಾರ ನಾಲ್ಕು ಕಾರ್ಖಾನೆಗಳಿಗೆ ಬೀಗ ಹಾಕಲಾಯಿತು.
ಸಚಿವರ ಸೂಚನೆಯ ಬೆನ್ನಲ್ಲೇ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆ.10ರಂದು ನೀಡಿದ ಆದೇಶದನ್ವಯ, ಗುರುವಾರ ಸಂಜೆ ಅಧಿಕಾರಿಗಳ ತಂಡ ಪ್ರತ್ಯಕ್ಷವಾಗಿ ಭೇಟಿ ನೀಡಿ ಕಾರ್ಖಾನೆಗಳನ್ನುಸೀಲ್‍ಡೌನ್ ಮಾಡುವ ಪ್ರಕ್ರಿಯೆ ಆರಂಭಿಸಿದರು. ಎಚ್-6, ಸತ್ಯ ದೀಪ್ತ ಫಾರ್ಮಾ,
ಹಿಮಾಲಯ , ಕೆಜಿಎಸ್ ಇಂಡಸ್ಟ್ರಿಗಳ ಕಾರ್ಯಸ್ಥಗಿತಮಾಡಿ ಅಧಿಕಾರಿಗಳು ಸೀಲೈನ್ ಕಾರ್ಖಾನೆಗೆ ಬೀಗ ಹಾಕಿದರು.
ಮಾಣಿಕನಗರದ ಗುರು ಗಂಗಾ ಹಳ್ಳದ ಮೂಲಕ ಕಾರಂಜಾ ಜಲಾಶಯಕ್ಕೆ ರಾಸಾಯನಿಕ ತ್ಯಾಜ್ಯ ಸೇರುತ್ತಿರುವುದಕ್ಕೆ ಜನರಿಂದ ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತ್ಯಾಜ್ಯ ಹರಡಿಸುತ್ತಿರುವ ಘಟಕಗಳನ್ನು ಮುಚಿಸಲು ಜಿಲಾಧಿಕಾರಿಗಳಿಗೆ. ಆ.10ರಂದು ಆದೇಶ ನೀಡಿದ ನೀಡಿದ್ದರು. ಕಾರ್ಖಾನೆಗಳಲಿನ ತಯಾರಿಕಾ ಘಟಕ ಸ್ಥಗಿತಗೊಳಿಸುವಂತೆ ಹುಮನಾಬಾದ್ ಆ.11ರಂದು ತಹಸೀಲ್ ಕಾರ್ಯಾಲಯದಿಂದ ಮೂಲಕ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಲಾವಕಾಶವೂ ಗುರುವಾರ 4 ಕಾರ್ಖಾನೆಗಳಿಗೆ ಬೀಗ್ ಜಡೆಯಲಾಗಿದೆ.
ಸಹಾಯಕ ಆಯುಕ್ತ ಪ್ರಕಾಶ ಕುದರೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ, ಕರ್ನಾಟಕ ಕೈಗಾ ರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಉಪ ಅಭಿವೃದ್ಧಿ ಅಧಿಕಾರಿ ಪ್ರೇಮಲತಾ, ತಾಪಂ ಅಧಿಕಾರಿ ದೀಪಿಕಾ ನಾಯ್ಕಲ್, ಡಿವೈಎಸ್ಪಿ ಮಡೋಳಪ್ಪ, ಪಿಎಸ್‍ಐ ಸುರೇಶ್ ಕುಮಾರ, ಕಂದಾಯ ನೀರಿಕ್ಷಕ ರಾಹುಲ್ ದೇವ, ಆನಂದ ಜಮಾಲೆ, ಸಹಾಯಕ ಪರಿಸರ ಮಾಲಿನ್ಯ ಅಧಿಕಾರಿ ಸಂತೋಷ್ ಸೇರಿದಂತೆ ಉಪಸ್ಥಿತರಿದ್ದರು.
14 ಕಾರ್ಖಾನೆಗಳು ಬಾಕಿ
ಸದರಿ ಕೈಗಾರಿಕಾ ಪ್ರದೇಶದಲ್ಲಿ 14 ಕಾರ್ಖಾನೆಗಳು ಕೆಂಪು ವರ್ಣ ವ್ಯಾಪ್ತಿಯಲ್ಲಿವೆ. ಇವುಗಳ ಕುರಿತೂ ತನಿಖೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು
ಸಹಾಯಕ ಆಯುಕ್ತ ಪ್ರಕಾಶ ಕುದರೆ






























