Home ಜಿಲ್ಲೆ ಬಿಎಲ್‍ಡಿಇಯ ನಾಲ್ವರು ವಿದ್ಯಾರ್ಥಿಗಳು ಜಪಾನ ಮೂಲದ ಕಂಪನಿಗೆ ಟ್ರೇನಿಗಳಾಗಿ ಆಯ್ಕೆ

ಬಿಎಲ್‍ಡಿಇಯ ನಾಲ್ವರು ವಿದ್ಯಾರ್ಥಿಗಳು ಜಪಾನ ಮೂಲದ ಕಂಪನಿಗೆ ಟ್ರೇನಿಗಳಾಗಿ ಆಯ್ಕೆ

ವಿಜಯಪುರ: ಮೇ.28:ಬಿಎಲ್‍ಡಿಇಎಯ ವಚನ ಪಿತಾಮಹ ಡಾ. ಪಿ. ಜಿ. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಜಪಾನ್ ಮೂಲದ ಬಹುರಾಷ್ಟ್ರೀಯ ಕಂಪನಿ ಟೆಸ್ಕಾಮ್ ಪದವೀಧರ ಎಂಜಿನಿಯರ್‍ಗ ಟ್ರೆನಿ ಗಳಾಗಿ ಆಯ್ಕೆ ಮಾಡಿದೆ, ವಾರ್ಷಿಕ 3.00 ಲಕ್ಷ ಪ್ಯಾಕೇಜ್‍ನೊಂದಿಗೆ. ಗಿರೀಶ್ ದಳವಾಯ್, ಅನುರಾಧ ಎನ್ ಅಕ್ಕಿ ಮತ್ತು ಸೌಂದರ್ಯ ಅನಂತಪುರ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‍ನವರಾಗಿದ್ದರೆ, ರಕ್ಷಿತಾ ಶಂಕರಪ್ಪ ಗದಗಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‍ನವರು.

ಪ್ರಾಂಶುಪಾಲ ಡಾ. ಮಂಜುನಾಥ ಪಿ ಮತ್ತು ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪೆÇ್ರ. ಪ್ರಶಾಂತ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ಈ ಸಾಧನೆಯನ್ನು ತಿಳಿಸಿದ್ದಾರೆ. ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಗಳನ್ನು ಉಪ ಪ್ರಾಂಶುಪಾಲ ಡಾ. ಲೀನಾ ರಾಘಾ ಮತ್ತು ವಿಭಾಗದ ಮುಖ್ಯಸ್ಥರು ಅಭಿನಂದಿಸಿದ್ದಾರೆ.