ನಾಲ್ವರ ಬಂಧಿಸಿ 48 ಸಾವಿರ ರೂ.ಮೌಲ್ಯದ ಗಾಂಜಾ ಜಪ್ತಿ

ಕಲಬುರಗಿ,ಜೂ.9-ನಗರದ ಸೂಪರ್ ಮಾರ್ಕೆಟ್‍ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆ ಪಿಎಸ್‍ಐ ಸುಭಾಶ್ಚಂದ್ರ ಹಾಗೂ ಸಿಬ್ಬಂದಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಆಳಂದ ತಾಲ್ಲೂಕಿನ ತಡಕಲ್ ಗ್ರಾಮದ ಶ್ರೀಕಾಂತ ಮಲ್ಲಪ್ಪ ಸಿರಸೆ (24), ಸಿದ್ದರಾಮ ಕಾಂತು ಪೂಜಾರಿ (19), ಮಹಾಗಾಂವ ಕ್ರಾಸ್‍ನ ರೋಷನ್ ಪಂಡಿತ ಸಾಗರ (10) ಮತ್ತು ಕಲಬುರಗಿಯ ಗೊಲ್ಲರಗಲ್ಲಿಯ ದುರ್ಗೇಶ ಶಂಕರ ಯಾದವ (19) ಎಂಬುವವರನ್ನು ಬಂಧಿಸಿ 48 ಸಾವಿರ ರೂ.ಮೌಲ್ಯದ 3210 ಗ್ರಾಂ.ಗಾಂಜಾ, ಒಂದು ಬೈಕ್ ಮತ್ತು ಮೊಬೈಲ್‍ಗಳನ್ನು ಜಪ್ತಿ ಮಾಡಿದ್ದಾರೆ.
ಇವರು ಮಹಾರಾಷ್ಟ್ರದ ಉಮ್ಮರ್ಗಾ ಹತ್ತಿರವಿರುವ ಕುಂದರವಾಡಿಯಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.