ಚನ್ನಮ್ಮನ ಕಿತ್ತೂರು,ಸೆ 6: ಮುಗ್ದ ಮನಸ್ಸಿನಲ್ಲಿ ಅಕ್ಷರಭಿತ್ತಿ ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಸುಂದರ ನಾಡು ಕಟ್ಟುವ ಅದ್ಬುತ ಶಿಲ್ಪಿಗಳು ಶಿಕ್ಷಕಕರು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಜಿಪಂ ಬೆಳಗಾವಿ, ತಾಪಂ ರಾಜ್ಯ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಕ್ಷೇತ್ರ ಸಮನ್ನಯ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ದೀಪ ಪ್ರಜ್ವಲನೆಗೊಳಿಸಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 2025-26ನೇ ಸಾಲಿನ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಶಿಕ್ಷಣ ಸಿಕ್ಕರೆ ದೇಶ ಬಲಿಷ್ಠವಾಗುತ್ತದೆ. ಶಿಕ್ಷಣದೊಂದಿಗೆ ಒಳ್ಳಯ ಸಂಸ್ಕಾರ ಕೊಡಬೇಕು ಎಂದರು.
ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಸ್ವಾಮಿಜೀ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು. ಸಿಪಿಐ ಶಿವಾನಂದ ಗುಡಗನಟ್ಟಿ ಭಜನೆಪದ ಹಾಡಿದರು. ನಿವೃತ್ತ ಹಾಗೂ ಆದರ್ಶ ಶಿಕ್ಷಕ, ಗಣ್ಯರನ್ನು ಸತ್ಕರಿಸಿ ತಾಲೂಕ ಜಿಲ್ಲಾಮಟ್ಟ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಕಲ್ಲನಗೌಡ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ, ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ಸ್ಥಾಯೀ ಕಮೀಟಿ ಅಧ್ಯಕ್ಷ ಎಂ.ಎಫ್. ಜಕಾತಿ, ಗಜಾನನ ಸೊಗಲನ್ನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಪ್ಪ ಮಸಳಿ, ಸಿಡಿಕೇಟ್ ಬ್ಯಾಂಕ್ ಮ್ಯಾನೇಜರ್, ಎಸ್.ಎಸ್.ಕಲ್ಮಠ, ಶೇಖರ ಹಲಸಗಿ, ವೀಣಾ ಹಿರೇಮಠ, ಸದಾಶಿವ ಪೋಳ, ಸಿದ್ದನ್ನಾ ಹುಲಮನಿ, ಈಶ್ವರ ಹುಪ್ಪರಿ, ಮೃತ್ಯುಂಜಯ ಕಲ್ಮಠ, ಎಸ್.ಎಂ.ಶಾಪೂರಮಠ, ಮುಖಂಡ ಅಶಪಾಕ ಹವಾಲ್ದಾರ, ಸಂಜೀವ ಹುಬ್ಬಳ್ಳಿ, ಜ್ಯೋತಿ ಕೊಟಗಿ, ಸ್ನೇಹಲ ಪೂಜಾರ ನಿರೂಪಿಸಿದರು, ಮಲ್ಲಿಕಾರ್ಜುನ ಕಡಕೋಳ ವಂದಿಸಿದರು. ಬಿಆರ್‍ಪಿ, ಸಿಆರ್‍ಪಿ, ಬಿಇಓ ಕಛೇರಿ ಸಿಬ್ಬಂದಿ, ಎಲ್ಲ ಶಾಲಾ ಶಿಕ್ಷಕ-ಶಿಕ್ಷಕೀಯರು ಇನ್ನಿತರರಿದ್ದರು

























