ಎನ್‌ಬಿಇಟಿ ಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಬೆಂಗಳೂರು, ಆ. ೮- ೧೯೮೫ರಲ್ಲಿ ನಗರದ ಉತ್ತರ ಭಾಗದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪೂರ್ಣ ಪ್ರಜ್ಞಾ ಅಕಾಡೆಮಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು.

ಆಗಸ್ಟ್ ೨ ರಂದು ಪ್ರಾರಂಭವಾದ ಈ ಶಾಲೆಯಲ್ಲಿ ಪ್ರಥಮವಾಗಿ ಆಂಗ್ಲ ವಿಭಾಗವನ್ನು ಪ್ರಾರಂಭಿಸಿ ೧ ರಿಂದ ೭ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಅಂದಿನ ಸರ್ಕಾರ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡದ ಹಿನ್ನೆಲೆ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಯಿತು ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟ್ ಹೇಳುತ್ತಾರೆ.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಎಂ. ರಘುಪತಿಯವರು ನೀವೊಂದು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಏಕೆ ಪ್ರಾರಂಭಿಸಬಾರದು ಎಂದು ಸಲಹೆ ನೀಡಿದ ಹಿನ್ನೆಲೆ ಎನ್.ಬಿ.ಇ.ಟಿ. ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪನೆಗೆ ಅವರು ಕಾರಣೀಭೂತರಾದರು ಎಂದು ನೆನಪಿಸಿಕೊಂಡರು.

ಎನ್.ಬಿ.ಇ.ಟಿ. ಕರ್ನಾಟಕದ ತಾಂತ್ರಿಕ ಶಿಕ್ಷಣ ರಂಗದಲ್ಲಿ ಒಂದು ಹೊಸ ಅಧ್ಯಾಯನವನ್ನು ಪ್ರಾರಂಭಿಸಿತು. ಖಾಸಗಿ ತಾಂತ್ರಿಕ ಕಾಲೇಜು ಬೆಂಗಳೂರು ಹಾಗೂ ರಾಜ್ಯಮಟ್ಟದಲ್ಲಿ ತನ್ನದೇ ಆದ ಉತ್ತಮ ಹೆಸರನ್ನು ಮಾಡಿ ಅತ್ಯುತ್ತಮ ಪಾಲಿಟೆಕ್ನಿಕ್ ಎಂದು ಹೆಸರುಗಳಿಸಿತು. ಇಲ್ಲಿಂದ ಪಾಸಾದ ವಿದ್ಯಾರ್ಥಿಗಳು ರಾಜ್ಯ- ರಾಷ್ಟ್ರೀಯ- ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸ್ವಯಂ ಉದ್ಯೋಗ ಗಿಟ್ಟಿಸಿಕೊಂಡು ಸಂಸ್ಥೆಗೆ ಹೆಸರು ತಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಪೂರ್ಣ ಪ್ರಜ್ಞಾ ಅಕಾಡೆಮಿ ಟ್ರಸ್ಟಿನ ನ್ಯಾಸಿಗಳು ವಯೋಧರ್ಮದ ಅಡಿಯಲ್ಲಿ ಹೆಚ್ಚು ಸಕ್ರಿಯರಾಗದ ಕಾರಣ ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ನಲ್ಲಿ ಎನ್.ಬಿ.ಇ.ಟಿ ಯನ್ನು ವಿಲೀನವಾಗಿಸಿ ೩೮ ವಸಂತಗಳು ದಾಟಿ ಅತ್ಯುತ್ತಮ ಪಾಲಿಟೆಕ್ನಿಕ್ ಎಂದು ಹೆಸರು ವಾಸಿಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ ಎಂದರು.

ಹೀಗೆ ಸಂಸ್ಥೆಯನ್ನು ಸಂಸ್ಥಾಪಿಸಿ, ಆರ್ಥಿಕ ಪ್ರಗತಿಗೆ ದುಡಿದು, ಶೈಕ್ಷಣಿಕ ರಂಗದಲ್ಲಿ ಸಮಾಜದಲ್ಲಿ ಉತ್ತಮ ಹೆಸರುಗಳಿಸಲು ಕಾರಣೀಕರ್ತರಾದ ಎಲ್ಲರಿಗೂ ಹೃದಯ ಪೂರ್ವಕ ಗೌರವ ಸಲ್ಲಿಸುತ್ತಾ, ಇಡೀ ಸಂಸ್ಥೆ ನಡೆದು ಬಂದ ವಿಹಂಗಮ ಹಾದಿಯಲ್ಲಿನ ಹೊಸ ಹೊಸ ಆಲೋಚನೆ, ರೂಪುರೇಷೆಗಳ ದೃಷ್ಟಿಯನ್ನು ನೆನೆಪಿಸಿಕೊಳ್ಳುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ಸಂಸ್ಥೆಯ ಅಡಿಯಲ್ಲಿ ಎನ್.ಬಿ.ಸಿ.ಯು ಕಾಲೇಜು ಹಾಗೂ ಪಿಪಿಎ ಶಾಲೆಯ ೧ ರಿಂದ ೧೦ನೇ ತರಗತಿಯವರೆಗೆ ಉತ್ತಮ ಮಟ್ಟದಲ್ಲಿ ನಡೆಸುತ್ತಾ, ಸಂಸ್ಥೆಗೆ ಉತ್ತಮ ಕೊಡುಗೆಯನ್ನು ನೀಡುತ್ತಾ ಬಂದಿದೆ.