
ಕಲಬುರಗಿ :ದಕ್ಷಿಣ ಅಸೆಂಬ್ಲಿಯ ವಾರ್ಡ್ 52 ರಲ್ಲಿ ಬರುವ ಹೈಕೋರ್ಟ್ ಪಕ್ಕದ ಅಕ್ಕ ಮಹಾದೇವಿ ಕಾಲೋನಿ ಬಡಾವಣೆಯಲ್ಲಿ ಭಾನುವಾರ ಶಾಸಕರಾದ ಅಲ್ಲಂಪ್ರಭು ಪಾಟೀಲರು 1. 45 ಕೋಟಿ ರು ವೆಚ್ಚದಲ್ಲಿ ಕೆಎಚ್‍ಬಿ ಅಕ್ಕ ಮಹಾದೇವಿ ಕಾಲೋನಿಯ ಸಂಪರ್ಕ ರಸ್ತೆ ಕಾಮಗಾರಿಗೆ ಅಡಿಗಲ್ಲು ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೆಕೆಆರ್‍ಡಿಬಿ 4. 90 ಕೋಟಿ ರು ಪ್ಯಾಕೇಜ್ ಅನುದಾನವನ್ನೆಲ್ಲ ನಗರ ಅಭಿವೃದ್ಧಿಗೆ ಬಳಸಲಾಗಿದೆ. ನಿಜಾಂಪೂರ, ಕಮಲಾ ನಗರ, ಅಕ್ಕ ಮಹಾದೇವಿ ಕಾಲೋನಿ, ಓಝಾ ಬಡಾವಣೆ, ಕುರುಬ ನಗರ, ಸಾವಿತ್ರಿ ಫುಲೆ ಬಡಾವಣೆ, ವೆಂಕಟೇಶ ನಗರ, ಗಿರಿ ಬಡಾವಣೆ, ಶರಣ ನಗರ, ಕಲಬುರಗಿಯ ಹಲವೆಡೆ ವೆಚ್ಚ ಮಾಡಲಾಗಿದೆ ಎಂದರು.
ಇದೇ ಪ್ಯಾಕೇಜ್‍ನಲ್ಲಿಯೇ ಅಕ್ಕ ಮಹಾದೇವಿ ಕಾಲೋನಿಯ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಅಭಿವೃದ್ಧಿ ಯೋಜನೆಗಳಿಗೆ ನರ ಸಹಕಾರ ಮುಖ್ಯವೆಂದು ಶಾಸಕರು ಇದೇ ಸಂದರ್ಭದಲ್ಲಿ ಹೇಳಿದರು. ಮುಖಂಡರಾದ ಲಿಂಗರಾಜ ತಾರಫೈಲ್, ಧರ್ಮರಾಜ ಹೆರೂರ್,
ಅಕ್ಕಮಹಾದೇವಿ ಬಡಾವಣೆಯ ಸುಶೀಲ್ ಮಮದೆ, ರವಿ ಕೊಳ್ಳೂರ, ರವಿ ಕೊಳ್ಳೂರ, ದಯಾನಂದ ಸ್ವಾಮಿ, ರಾಣಪ್ಪ, ಬಾಬೂ, ಚಂದ್ರಕಾಂತ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಬಡಾವಣೆಯ ಹಿರಿಯರು, ಮುಖಂಡರು ಹಾಜರಿದ್ದರು.






























