ಅಫಜಲಪುರ:ಸೆ.28: ಮಹಾರಾಷ್ಟ್ರದ ಉಜನಿ, ವೀರ, ಸೀನಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಭೀಮಾ ನದಿ ದಡದಲ್ಲಿರುವ ಗ್ರಾಮಗಳಿಗೆ ಪ್ರವಾಹ ಸೃಷ್ಟಿಯಾಗಿ ನೂರಾರು ಮನೆಗಳಿಗೆ ಹಾಗೂ ಜಾಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಗೊಳದ ಸ್ಥಳಗಳಿಗೆ ಮಾಜಿ ಸಂಸದ ಡಾ.ಉಮೇಶ್ ಜಾಧವ ಬೇಟಿ ನೀಡಿದರು.
ತಾಲೂಕಿನ ಪ್ರವಾಹ ಪೀಡಿತ ದೇವಲ ಗಾಣಗಾಪುರ, ಸೊನ್ನ ಬ್ಯಾರೇಜ್ ಗ ಬೇಟಿ ನೀಡಿ ಮಾತನಾಡಿದ ಅವರು, ಪ್ರವಾಹ ಮತ್ತು ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಮನೆಗಳು, ಶಾಲಾಕಾಲೇಜುಗಳು, ಧಾರ್ಮಿಕ ಕ್ಷೇತ್ರಗಳು ಮುಳುಗಿವೆ, ಆದರೆ ಸರ್ಕಾರ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಜನರಿಗೆ ಇಲ್ಲಿವರೆಗೂ ಯಾವುದೇ ಪರಿಹಾರ ವಿತರಣೆ ಮಾಡಿಲ್ಲ, ಅಲ್ಲದೇ ಸರ್ಕಾರ ಪ್ರವಾಹ ನಿರ್ವಹಣೆಗೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಅತಿವೃಷ್ಟಿ ಎಂದು ಘೋಷಣೆ ಮಾಡಿ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾಟಾಚಾರಕ್ಕೆ ಬಂದು ಪ್ರವಾಹ ಪೀಡಿತಗಳಿಗೆ ಬಂದು ಹೋಗಿದ್ದಾರೆ ಅಷ್ಟೇ. ಯಾವುದೇ ಜನಸಾಮಾನ್ಯರಿಗೆ ಸ್ಪಂದಿಸಬೇಕು ಕೆಲಸ ಮಾಡಿಲ್ಲ,ಮಹಾರಾಷ್ಟ್ರದಿಂದ ಭೀಮಾ ನದಿಗೆ ಬರುವ ನೀರಿನ ಪ್ರಮಾಣ ನಿಖರವಾಗಿ ಮಾಹಿತಿ ನೀಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿ, ಜಿಲ್ಲಾ ಉಸ್ತುವಾರಿ ಸಚಿವರ ನಿಧಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಬೆಳೆ ಪರಿಹಾರ, ಬೆಳೆ ವಿಮೆ ಬಿಡುಗಡೆ,ರೈತರ ಸಾಲ ಮನ್ನಾ, ಕುಸಿದು ಮನೆಗಳಿಗೆ ನಿರ್ಮಾಣ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದತ್ತಾತ್ರೇಯ ಪಾಟೀಲ್, ಚಂದು ಪಾಟೀಲ್, ಅಶೋಕ್ ಬಗಲಿ, ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ಲಿಂಗದಳ್ಳಿ, ವಿಜಯಕುಮಾರ ದೇಸಾಯಿ, ಸುನೀಲ್ ಶೆಟ್ಟಿ, ಧಾನು ಪತಾಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



























