
ಸಂಜೆ ವಾಣಿ ವಾರ್ತೆ
ಜಮಖಂಡಿ:ಜ.೨೨: ಮಾಜಿ ದೇವದಾಸಿಯರು ಎಂದರೆ ಹಳೆ ಬೇರು ಇದು ಹೊಸ ಚಿಗುರು ಆಗಬಾರದು ಎಂದು ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಶಿವಾನಂದ ಪಾರಾಶೆಟ್ಟಿ ಹೇಳಿದರು.
ನಗರದ ತಾಲೂಕು ಪಂಚಾಯತ ಕಾರ್ಯಾಲದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಯ್ ಇಲಾಖೆ ಬಾಗಲಕೋಟೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಜಮಖಂಡಿ, ದೇವದಾಸಿ ಪುನರ್ವಸತಿ ಯೋಜನೆ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ತಾಲೂಕಾ ಪಂಚಾಯತ ಮಾಜಿ ದೇವದಾಸಿ ಮಹಿಳೆಯರಿಗೆ ಒಂದು ದಿನದ ಕಾನೂನು ಅರಿವು ನೆರವು ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ೨ ಶತಮಾನದಲ್ಲಿ ದೇವದಾಸಿಯರು ಎಂದರೆ ದೇವರಿಗೆ ಸಮರ್ಪನೆ ಮಾಡಿ ದೇವಸ್ಥಾನದ ಆವರಣ ಸ್ವಚ್ಛ ಗೋಳಿಸುವದು ಮತ್ತು ನೃತ್ಯ,ಸಂಗಿತ ಇನ್ನಿತರ ಚಟುವಟಿಕೆಗಳಲ್ಲಿ ನೋಡಿಕೊಳ್ಳುವ ಕಾರ್ಯವಾಗಿತ್ತು ಆದರೆ ದುರ್ದೈವ ವೈಶಾವಾಠ ಪರಿವರ್ತನೆ ಗೊಂಡಿತು
ಧಾರ್ಮಿಕ ಅಂಧಶ್ರದ್ಧೆ, ಮೂಢನಂಬಿಕೆ, ಆರ್ಥಿಕ ದುಸ್ಥಿತಿ, ಸಾಮಾಜಿಕ ಅಸಮಾನತೆ, ಅನಕ್ಷರತೆ, ಅಸ್ಪ್ಯಶ್ಯತೆ ಕಾರಣದಿಂದ ಮುಗ್ಧ ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ಸಮರ್ಪಿಸಿ ಇಂದಿಗೂ ಮುತ್ತುಕಟ್ಟುವ ಮತ್ತು ದೇವದಾಸಿ ಪದ್ಧತಿಗೆ ಕಟ್ಟು ಬೀಳುತ್ತಿರುವುದು ದುರಂತದ ಸಂಗತಿ.
ಮಹಿಳೆಯರ ಶೋಷಣೆಗೆ ಕಾರಣವಾಗುತ್ತಿರುವ ಪಿಡುಗು ಹೋಗಲಾಡಿಸಲು ಸರಕಾರದ ಜತೆ ಸಂಘ ಸಂಸ್ಥೆಗಳು ಕೆಜೋಡಿಸುತ್ತಾಯಿದ್ದು. ಶೆಕ್ಷಣಿಕ ಪ್ರಗತಿಗೆ ಸರಕಾರದ ನಾನಾ ಸೌಲಭ್ಯಗಳಿದ್ದರೂ ಮಕ್ಕಳು ಶಾಲೆಗಳಿಂದ ದೂರ ಉಳಿಯುತ್ತಿರುವುದಕ್ಕೆ ಕಾರಣ ಕಂಡುಕೊಳ್ಳಲು ನಮ್ಮ ನಿಮ್ಮೇಲರ ಹೊನೆಯಾಗಿದೆ ಎಂದರು.
ಸರಕಾರ ೧೯೮೨ ರಲ್ಲಿ ದೇವದಾಸಿ ಪದ್ಧತಿ ನಿಷೇಧ ಕಾಯಿದೆ ಜಾರಿಗೆ ತಂದಿದೆ. ದೇವದಾಸಿ ಕೆಲಸಕ್ಕೆ ಪ್ರೇರಣೆ ಮಾಡುವ ವ್ಯಕ್ತಿಗೆ ೨ ತಿಂಗಳು ಜೈಲು ಹಾಗೂ ಎರಡು ಸಾವಿರ ರೂ. ದಂಡ ವಿಧಿಸುವ ಕಾನೂನು ಇದೆ. ೨೦೦೯ ರಲ್ಲಿ ದೇವದಾಸಿಗೆ ಮರು ಮದುವೆ ಪದ್ಧತಿ ಜಾರಿಗೆ ತರಲಾಗಿದೆ.
ಈ ಹಿನ್ನೆಲೆಯಲ್ಲಿ ದೇವದಾಸಿಯರು ಕಾನೂನು ಅರಿವು ಹೊಂದುವ ಮೂಲಕ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಬಿ ಬದುಕು ಸಾಗಿಸುವುದು ಪ್ರಸ್ತುತ ದಿನಮಾನದಲ್ಲಿ ಅಗತ್ಯವಿದೆ ಎಂದರು.
ನ್ಯಾಯವಾದಿ ಲಕ್ಷ್ಮೀ ಸವದಿ ಮಾತನಾಡಿ ಅನಿಷ್ಠ ಪದ್ಧತಿಗೆ ಒಳಗಾಗುವುದು ಮತ್ತು ಈ ಕುರಿತಂತೆ ಉತ್ತೇಜನ ನೀಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ಸೇವಾ ಸಮಿತಿಯಿಂದ ಕಾನೂನಿನ ಉಚಿತ ನೆರವು ನೀಡಲಾಗುತ್ತದೆ ಎಂದರು. ಮಹಿಳೆಯರ ಪರವಾದ ಕಾನೂನು,ಸೋಷನೆಗೆ ಒಳಗಾದ ಮಹಿಳೆಯರ
ಕುರಿತಂತೆ ಕಾನೂನಿನ ಅರಿವಿನ ಮಾಹಿತಿ ನೀಡಿದರು.
ಸರಕಾರ ದೇವದಾಸಿಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮಹಿಳೆಯರು ಕಾನೂನು ಜ್ಞಾನ ಅಗತ್ಯವಾಗಿದೆ ಎಂದು ಹೇಳಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಾರ್ಯಲಯದ ಬಿ.ಜಿ ಹಿರೇಮಠ,ಜಿಲ್ಲಾ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಪೂಜಾರಿ, ತರಬೇತಿದಾರ ಶಿವುಕುಮಾರ ಅವರು ಮಾತನಾಡಿದರು
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ನೀರಿಕ್ಷಕಿ ಮಧು ಲೋಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು
ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಎಮ್.ಬಿ.ಮದರಖಂಡಿ ಸ್ವಾಗತಿಸಿ ವಂದಿಸಿದರು























