ಎಸ್.ಐ.ಟಿ ರಚನೆ ಕಾಂಗ್ರೆಸ್ ಕುತಂತ್ರ, ಎನ್.ಐ.ಎಗೆ ಹಸ್ತಾಂತರಿಸಿ: ಹಣಮಂತರಾಯಗೌಡ ಪಾಟೀಲ

ಇಂಡಿ:ಅ.28: ಆಧಾರ ರಹಿತ ವ್ಯಕ್ತಿಯಿಂದ ಇಡೀ ಧರ್ಮಸ್ಥಳ ಅಪವಿತ್ರ ಮಾಡಿ ಹಿಂದೂಗಳ ಭಾವನೆ ಧಕ್ಕೆಯುಂಟ್ಟು ಮಾಡಿರುವವರನ್ನು ಎಸ್.ಐ.ಟಿ ಯಿಂದ ಶಿಕ್ಷೆ ಅಸಾಧ್ಯೆ
ಎಸ್.ಐ.ಟಿ ರಚನೆ ಕಾಂಗ್ರೆಸ್ ಕುತಂತ್ರ ಎನ್.ಐ.ಎ ಹಸ್ತಾಂತರಿಸಿ ಆರೋಪಿಗಳಿಗೆ
ಗಲ್ಲು ಶಿಕ್ಷೆಯಾಗಬೇಕು ಧರ್ಮದ ಉಳಿವಿಗಾಗಿ ಬಿಜೆಪಿ ಧರ್ಮಯುದ್ಧ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ತಿಳಿಸಿದರು.
ಬಿಜೆಪಿ ಮಂಡಲ ವತಿಯಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಜಿಲ್ಲಾ ವರಿಷ್ಠರು ಸಮ್ಮುಖದಲ್ಲಿ ಅಂಬೇಡ್ಕರ ಸರ್ಕಲ್‍ದಿಂದ ಮಿನಿವಿಧಾನ ಸೌಧಾದವರೆಗೆ ಪ್ರತಿಭಟನೆ ಮಾಡಿ ತಹಶೀಲ್ದಾರ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ವರು ಧರ್ಮಸ್ಥಳದ ಶ್ರೀಮಂಜುನಾಥ ದೇವಸ್ಥಾನ ಹಿಂದೂಗಳ ಶ್ರದ್ದಾಕೇಂದ್ರ . ಕೆಲ ಕಿಡಗೇಡಿಗಳು ಇಲ್ಲ ಸಲ್ಲದ ಆರೋಪ ಹೇಳಿಕೆ ನೀಡಿರುವುದು ಘೋರ ಅಪರಾಧವಾಗಿದೆ. ಇದು ಒಬ್ಬಿಬ್ಬರಿಂದ ಅಲ್ಲ ಇದರ ಹಿಂದೆ ಕಾಣದ ಕೈಗಳು ದೊಡ್ಡ ಹುನ್ನಾರ ನಡೆದಿದೆ , ಅನಾಮಿಕ ವ್ಯಕ್ತಿಯ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ಸರಕಾರ ಅಪಾರ ಪ್ರಮಾಣದಲ್ಲಿ ಹಣಖರ್ಚು ಮಾಡಿದೆ, ಸನಾತನ ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಕೂಡಲೆ ತಪ್ಪಿಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲಾ ಬಿಜೆಪಿ ಮುಖಂಡ ಅನೀಲ ಜಮಾದಾರ ಮಾತನಾಡಿ ಧರ್ಮಸ್ಥಳ ಧಾರ್ಮಿಕ ಭಕ್ತಿಯ ಕೇಂದ್ರ ಸ್ಥಾನ ಎಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಅಲ್ಲಲ್ಲಿ ಇಂತಹ ಹಿಂದೂ ದೇವಾಲಯ ,ಧಾರ್ಮಿಕ ಕೇಂದ್ರಗಳಲ್ಲಿ ಷೆಡ್ಯೆಂತ್ರ ಸದಾ ನಡೆಯುತ್ತಿವೆ. ಈ ಅರೋಪ ಮಾಡಿರುವ ವ್ಯಕ್ತಿಗಳು ಹಿಂದೂಗಳಲ್ಲ ಮುಸ್ಲಿಂ, ಕ್ರೈಸ್ಟ ಮತಾಂತರಗೊಂಡ ಧರ್ಮದ್ರೋಹಿಗಳು ಇಂತಹ ಭಯೋತ್ಪಾದಕರ ಹಿಂದೆ ಕಾಂಗ್ರೆಸ್ ಸಂಸದರ ಕೈವಾಡ ಇರುವ ಶಂಕೆ ಇದೆ ಕೂಡಲೆ, ತಲೆ ಬುರುಡೆ ಕಥೆ ಕಟ್ಟಿದ ತಿಮ್ಮರೊಡ್ಡಿ,ಮಟ್ಟಣ್ಣವರ್ ಹಣತಗೆದುಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದು ಕೂಡಲೆ ರಾಷ್ಟ್ರೀಯ ತನಿಖಾ ತಂಡ ರಚನೆ ಮಾಡಿ ಗಲ್ಲು ಶಿಕ್ಷೆ ಒಳಪಡಿಸಬೇಕು ಒಂದು ವೇಳೆ ಆರೋಪಿತರನ್ನು ರಕ್ಷಸಿದರೆ ನೇರ ಸರಕಾರ ಹೋಣೆಯಾಗುತ್ತದೆ ಎಂದು ಕಾಂಗ್ರೆಸ್ ವಿರುಧ್ಧ ಹರಿಹಾಯ್ದರು.
ಷ್ಯಡ್ಯಂತರ ಭಾಗವಾಗಿ ಮುಸುಕುಧಾರಿಯ ಪೂರ್ವಾಪರ ತಿಳಿಯದೆ ಕಾಂಗ್ರೆಸ್ ಎಸ್.ಐ,ಟಿ ರಚನೆ ಮಾಡಿದ್ದೇಕೆ ? ಹಿಂದೂ ಧಾರ್ಮಿಕ ಕೇಂದ್ರ ಅಲ್ಲದೇ ಬೇರೆ ಧಾರ್ಮಿಕ ಕೇಂದ್ರಗಳಿಗೆ ಕಾಂಗ್ರೆಸ್ ಎಸ್.ಐ.ಟಿ ರಚನೆ ಮಾಡುತ್ತಿರಲ್ಲಿಲ್ಲ. ಇಷ್ಠೇಲ್ಲಾ ಹಣ ಖರ್ಚು ಮಾಡಿದ್ದು ಯಾರಪ್ಪನ ದುಡ್ಡು, ಗ್ಯಾರಂಟಿ ಯೋಜನೆಗೆ ಎಸ್,ಇ.ಪಿ.ಟಿ.ಎಸ್.ಪಿ ಹಣ ನುಂಗಿ ದಲಿತ ಬಡವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಸರಕಾರ ನಾಚೀಕೆಯಾಗಬೇಕು ಎಂದು ಜಿಲ್ಲಾ ಮುಖಂಡ ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕೀವುಡೆ, ಸಿದ್ದಲಿಂಗ ಹಂಜಗಿ ಜಂಟಿಯಾಗಿ ಆರೋಪಿಸಿದರು.

ದೇವೇಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ರಾಜಕುಮಾರ ಸಗಾಯಿ, ಪುಟ್ಟುಗೌಡ ಪಾಟೀಲ, ವಿಜಯಲಕ್ಷಿ??ೀ ರೂಗಿಮಠ ರಾಮಸಿಂಗ ಕನ್ನೋಳ್ಳಿ, ಬತ್ತುಸಾಹುಕಾರ , ಚೆನ್ನುಗೌಡ ರೋಡಗಿ,ಸೋಮು ನಿಂಬರಗಿಮಠ,ಬಾಳು ಮುಳಜಿ, ಶಿವಾನಂದ ಬಗಲಿ, ವಿಜಯಕುಮಾರ ಮೂರಮನ್, ಮಹೇಶ ಹೂಗಾರ, ಉಮೇಶ ಗೌಳಿ, ಭೀಮರಾಯಗೌಡ ಬಿರಾದಾರ, ವಿಜಯಕುಮಾರ ರಾಠೋಡ, ಮಲ್ಲು ವಾಲೀಕಾರ ಇದ್ದರು.