ಕೋಲಾರ,ಆ,೧೩- ಭಾರತದ ಸಂವಿಧಾನದ ಆಶಯದಂತೆ ಯುವ ಜನರ ಘನತೆಯ ಬದುಕಿಗಾಗಿ ಯುವ ಜನ ಆಯೋಗದ ಅವಶ್ಯಕತೆ ಇದೆ. ಇದಕ್ಕಾಗಿ ಯುವಧ್ವನಿಯನ್ನು ಎತ್ತಲು ಯೂತ್ ಇನ್ ಇಂಡಿಯಾ ಸಂಘಟನೆಯನ್ನು ರಚಿಸಿ ಕೊಂಡು ಯುವ ಜನತೆಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ದೆಸೆಯಲ್ಲಿ ಯುವಜನ ಆಯೋಗ ಸ್ಥಾಪನೆಗೆ ಸಂಬಂಧಿಸಿದಂತೆ ಜಾಗೃತಿ ಮೂಢಿಸಿ ಸರ್ಕಾರ ಗಮನ ಸೆಳಯುವ ಪ್ರಯತ್ನವಾಗಿದೆ. ಎಂದು ಸಂವಾದ ಯುವಪಡೆ ಸಂಘಟನೆಯ ಒಡನಾಡಿ ಸಂಯೋಜಕಿ ಸಬೀನಾ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಯುವ ಜನರು ರಾಜ್ಯದಲ್ಲಿ ಸುಮಾರು ೧,೬೦ ಕೋಟಿ ಇದ್ದಾರೆ. ಯುವ ಜನರ ಸಾಮಾಜಿಕ ಸ್ಪಂದನೆಗಾಗಿ ಯುವ ಜನರು ರೂಪಿಸಿ ಕೊಂಡಿರುವ ಯುವ ವೇದಿಗೆ ಇದಾಗಿದೆ ಯುವಜನರ ಸಬಲೀಕರಣ ಮುಖ್ಯಧ್ಯೇಯವಾಗಿದೆ. ಯುವ ಜನರ ಹಕ್ಕುಗಳಿಗಾಗಿ ಅಭಿಯಾನಗಳ ಅವಶ್ಯಕತೆ ಇದೆ. ಶಿಕ್ಷಣ. ಉದ್ಯೋಗ, ಸಮಾಜಿಕ ಮೂಲ ಭೂತ ಸೌಲಭ್ಯಗಳಿಗೆ ಸಂಬಂಧಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ಯುವ ಸಬಲೀಕರಣದ ಕೇಂದ್ರಗಳನ್ನು ರಾಜ್ಯಾದಾದ್ಯಂತ ಸ್ಥಾಪಿತವಾಗ ಬೇಕು. ಯುವಕರಿಗೆ ಸಮರ್ಪಕವಾದ ಮಾರ್ಗದರ್ಶನವನ್ನು ನೀಡಲು ಯುವ ವೇದಿಕೆಗಳನ್ನು ಸ್ಥಾಪಿಸ ಬೇಕು. ಈಗಾಗಲೆ ಯುವ ನಿಧಿಯನ್ನು ಸ್ಥಾಪಿಸಿರುವ ಸರ್ಕಾರವು ಬಿಸಿಯುಟವನ್ನು ಕಾಲೇಜು ಮಟ್ಟಕ್ಕೂ ವಿಸ್ತರಿಸುವಂತಾಗ ಬೇಕೆಂದು ಆಗ್ರಹಿಸಿದರು.
ಪರಿಸರ ನ್ಯಾಯಕ್ಕಾಗಿ ಯುವಧ್ವನಿಯು ಗಟ್ಟಿಯಾಗ ಬೇಕಾಗಿದೆ. ಲೈಂಗಿಕ ಕಿರುಕುಳಗಳನ್ನು ನಿಯಂತ್ರಿಸಲು ಸಮಿತಿಗಳನ್ನು ರಚಿಸಿ ಪೋಕ್ಸೋ ಕಾಯ್ದೆಗಳ ಕುರಿತು ಅರಿವು ಮೂಡಿಸುವಂತಾಗಬೇಕು. ಬಾಲ್ಯ ವಿವಾಹಗಳಿಂದ ಉಂಟಾಗುವಂತ ಅನಾಹುತಗಳನ್ನು ತಡೆಗಟ್ಟುವಿಕೆ ಹಾಗೂ ಬಾಲ್ಯ ವಿವಾಹವನ್ನು ಸಂವಿಧಾನ ಮಟ್ಟದಲ್ಲಿ ಅಪರಾಧವೆಂದು ಪರಿಗಣಿಸಲಾಗಿರುವ ಕುರಿತು ಅರಿವುಂಟು ಮಾಡಲು ನಾಟಕಗಳು, ಜಾಥಗಳು, ಕರಪತ್ರಗಳ ಹಂಚಿಕೆ ,ಸಂವಾದಗಳ ಮೂಲಕ ಹಲವಾರು ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡ ಬೇಕಾಗಿದೆ ಎಂದು ಹೇಳಿದರು.
ಭಾರತದಲ್ಲಿ ಯುವ ಜನತೆ ಸಮಸ್ಯೆಗಳಿಗೆ ಗೊಂದಲಗಳಿಗೆ ಸಮರ್ಪಕವಾದ ಮಾರ್ಗದರ್ಶನ ಇಲ್ಲದೆ ಆತ್ಮಹತ್ಯೆ ಮಾಡಿ ಕೊಂಡಿರುವವರ ಪೈಕಿ ಸುಮಾರು ಶೇ ೪೦ರಷ್ಟು ಮಂದಿ ೧೫ ರಿಂದ ೨೯ ವರ್ಷದವರಾಗಿದ್ದಾರೆ. ಕಳೆದ ೨೦೨೧ರಲ್ಲಿ ಶೇ ೩೪.೫ ರಷ್ಟು ಮಂದಿ ೧೫ ರಿಂದ ೩೦ ವರ್ಷದವರಾಗಿದ್ದಾರೆ. ೨೦೨೧ರಲ್ಲಿ ಭಾರತದಲ್ಲಿ ಒಟ್ಟು ೧೩೦೬೯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
೨೦೨೦ರಲ್ಲಿ ಅತ್ಯಾಚಾರಕ್ಕೆ ಗುರಿಯಾದವೆಉ ೧೨ ರಿಂದ ೩೦ ವರ್ಷದವರಾಗಿದ್ದಾರೆ. ಯುವತಿಯರ ಸಂಖ್ಯೆ ೨೮,೧೫೩ ಅಗಿದೆ, ೨೦೨೦ರಲ್ಲಿ ಹತ್ಯೆಯಾದ ಯುವಜನತೆ ಸಂಖ್ಯೆ ೩೦೧೮೩ ಅಗಿದೆ ಎಂದು ವಿವರಿಸಿದರು.
ಯುವ ಪಡೆಯ ಸಂಯೋಜಕಿ ನಂದಿನಿ ಮಾತನಾಡಿ ಯುವ ಜನರ ಹಕ್ಕುಗಳ ರಕ್ಷಣೆಗಾಗಿ ಮತ್ತು ಯುವ ಜನರ ಶಿಕ್ಷಣ ಹಾಗೂ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದರ ಜೂತೆಗೆ ಅನುಷ್ಠಾನಕ್ಕೆ ತರುವುದು ಯುವಜನ ಆಯೋಗದ ಗುರಿ ಮತ್ತು ಉದ್ದೇಶವಾಗಿದೆ ಎಂದರು.

























