ಇಂಡಿ:ಸೆ.೨೩: ಒಂದು ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ದುಡಿಯುವ ವರ್ಗ ದುಡಿಯುವ ಬಂಡವಾಲ ಸ್ಥಿರವಾಗಿರಬೇಕು ಹಾಗೂ ಆಡಳಿತ ಮಂಡಳಿ ಕೈ,ಬಾಯಿ ಸ್ವಚ್ಛ ಇದ್ದಾಗ ಮಾತ್ರ ಪ್ರಗತಿಯಡೆ ಸಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಬಾಗವಾನ ಅಲ್ಪಸಂಖ್ಯಾತ ನೂತನ ಕಟ್ಟಡ, ೨೪-೨೫ನೇಸಾಲಿನ ಸರ್ವ ಸಾಧಾರಣಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಬ್ಯಾಂಕುಗಳು ಆರ್ಥಿಕ ಸದೃಢವಾಗಬೇಕಾದರೆ ದುಡಿಯುವ ಬಂಡವಾಳ ನಿರಂತರ ದುಡಿಮೆಯಲ್ಲಿರಬೇಕು ಹಾಗೂ ಆಡಳಿತ ಮಂಡಳಿ ಸಾರ್ವಜನಿಕರಿಗೆ ವಿಶ್ವಾರ್ಹತೆ ಮುಖ್ಯ ಅಂದಾಗ ಅಭಿವೃದ್ದಿಯಾಗುತ್ತವೆ. ಇಂದು ಸರಕಾರಿ ಬ್ಯಾಂಕುಗಳು ಜನರ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ ಉದಾಹರಣೆ ಚಡಚಣ ಬ್ಯಾಂಕ ದರೋಡೆ ಇಂತಹ ಕೃತ್ಯಗಳು ನಡೆಯಕೂಡದು ಬ್ಯಾಂಕಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಅನ್ನಹಾಕುವ ಸಂಸ್ಥೆಗಳಲ್ಲಿ ಕೈ ಬಾಯಿ ಸ್ವಚ್ಛ ಇಟ್ಟುಕೊಂಡು ದುಡಿಯಬೇಕು ಇಂದು ಭಾಗವಾನ ಸಹಕಾರಿ ಬ್ಯಾಂಕು ಜನರ ವಿಶ್ವಾರ್ಹತೆ ಗಳಿಸಿಕೊಂಡಿದೆ ಬಡ ಉದ್ಯೋಗಸ್ಥರಿಗೆ ಆರ್ಥಿಕ ಸಹಾಯ ಮಾಡಿ ಸಧೃಡರನ್ನಾಗಿ ಮಾಡಿದೆ ಎಂದರು.
ಸಹಕಾರಿ ರತ್ನ ಶ್ರೀಮಂತ ಇಂಡಿ, ಎಂ ಆರ್ ಪಾಟೀಲ, ಬ್ಯಾಂಕಿನ ಅಧ್ಯಕ್ಷ ಸತಾರ ಬಾಗವಾನ ಮಾತನಾಡಿದರು.
ಗೋಳಸಾರದ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು ದಿವ್ಯಸಾನಿಧ್ಯವಹಿಸಿದರು.
ಸೈಯದ ಜೈಲಾದೀನ ಫಿರಜಾದೆ, ಅಬ್ದುಲರಹೇಮಾನ ಅಂತೂಲೆ, ಮುನ್ನಾ ಬಾಗವಾನ,ಪುರಸಭೆಅಧ್ಯಕ್ಷ ಲಿಂಬಾಜಿ ರಾಠೋಡ, ಜೆಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ನಾಗೇಂದ್ರ ಕಟ್ಟಿಮನಿ, ನಿವೃತ್ತ ಸಹಕಾರಿ ಸಂಘಗಳ ಉಪನಿಂಬAಧಕ ಚಿದಾನಂದ ನಿಂಬಾಳ, ಎಸ್.ಎಸ್ ಬರ್ಮಾ, ನಿರೀಕ್ಷಕ ವಿಜಯಕುಮಾರ ನಾಯಕ,ನಿರ್ಮಲಾ ಕೊಂಕಣಗಾವ, ಜಾವೇದ ಮೋಮಿನ್, ರಾಜು ಪತಂಗೆ ,ಡಾ.ರಾಜೇಶ ಕೊಳೇಕರ್ ಇದ್ದರು.




























