ಶ್ರದ್ಧೆ ಭಕ್ತಿಯಿಂದ ಜರುಗಿದ ಪಾದಪೂಜೆ

ಕಲಬುರಗಿ :ಅ.6: ಶರಣರು ಮೆಟ್ಟಿದ ಧರೆ ಪಾವನ ಶರಣರ ಪಾದಕ್ಕೆ ಯರುಗಿದ ಭಕ್ತನ ಬದುಕು ಪಾವನ. ಶರಣರ ಪಾದದಲ್ಲಿ ಅಷ್ಟೊಂದು ಅದ್ಭುತ ಶಕ್ತಿ ಇದೆ ಎಂಬ ಭಾವನೆಯಿಂದ ಭಕ್ತರು ಶ್ರಾವಣ ಮಾಸ ನಿಮಿತ್ಯವಾಗಿ ಶರಣರ ಪಾದ ಪೂಜೆ ಭಕ್ತಿ ಭಾವದಿಂದ ಮಾಡುವುದು ವಾಡಿಕೆ ಅದೇ ತರನಾಗಿ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಸಿದ್ದ ತೋಟೇಂದ್ರ ಶಿವಾಚಾರ್ಯರ ಪಾದಪೂಜೆಯನ್ನು ಭಕ್ತರು ಭಕ್ತಿ ಭಾವದಿಂದ ಪೂಜಿಸುವುದರ ಮೂಲಕ ಹಾಗೂ ಆ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವುದರ ಮೂಲಕ ಶಿವನ ಸಾನಿಧ್ಯದಲ್ಲಿ ಕುಳಿತಿರುವ ಭಾವನೆಯ ಬಾಸದಿಂದ ತಾವು ಕೃತಜ್ಞರಾದೆವು ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ