ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಚಡಚಣ :ನ.೫: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೮ ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಶ್ರೀ ವಿಠ್ಠಲ ಕಟಕಧೋಂಡ ಮಾನ್ಯ ಶಾಸಕರು ಅವರು ಗೋ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಸರಕಾರ ಸಂಪೂರ್ಣ ಕಾಲುಬಾಯಿ ಜ್ವರ ರೋಗವನ್ನು ನಿರ್ಮೂಲನೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ, ಈ ರೋಗವು ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟುಮಾಡುತ್ತದೆ, ಅದನ್ನು ತಡೆಗಟ್ಟಲು ಲಸಿಕೆಯೊಂದೆ ಏಕೈಕ ಮಾರ್ಗ ವಾಗಿರುವುದರಿಂದ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಸಂರಕ್ಷಣೆ ಮಾಡಿಕೊಳ್ಳಲು ತಿಳಿಸಿದರು. ತಾಲ್ಲೂಕಾ ಪಶುಪಾಲನಾ ಇಲಾಖೆಯವರು ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದ್ದು ರೈತರು ತಪ್ಪದೆ ಲಸಿಕೆ ಹಾಕಿಸಿಕೊಂಡು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಡಾ: ಎಂ.ಎಸ್ ಗಂಗನಳ್ಳಿ ಮಾತನಾಡಿ, ತಾಲ್ಲೂಕಿನಲ್ಲಿ ನವ್ಹೆಂಬರ್ ೦೩ ರಿಂದ ದಿಸ್ಸೆಂಬರ್ ೦೨ ರ ವರೆಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಲು ೨೦ ಲಸಿಕೆದಾರರು ಮತ್ತು ೪ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ತಾಲ್ಲೂಕಿನಲ್ಲಿ ದನ ೧೧೪೫೮ , ಎಮ್ಮೆ ೧೭೬೦೪ ಒಟ್ಟು ೨೯೦೬೨ ಜಾನುವಾರುಗಳಿದ್ದು ಅವುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು ೮ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಜ್ವರ ಲಸಿಕೆಯನ್ನು ತಾಲ್ಲೂಕಿನಲ್ಲಿರುವ ಎಲ್ಲ ದನ ಕರುಗಳಿಗೆ ಉಚಿತವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಹಾಕಲಾಗುತ್ತದೆ ಆದ್ದರಿಂದ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ವಿನಂತಿಸಿದರು.
ಈ ಸಂದAರ್ಭದಲ್ಲಿ ಒಂದು ವೇಳೆ ಲಸಿಕೆಯಿಂದ ವ್ಯತಿರಿಕ್ತ ಪರೀಣಾಮ ಉಂಟಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಔಷಧಿಗಳ ಕಿಟ್‌ಗಳನ್ನು ಮಾನ್ಯ ಶಾಸಕರಿಂದ ವಿತರಿಸಲಾಯಿತು, ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸದರೀ ಕಾರ್ಯಕ್ರಮದಲ್ಲಿ
ಮಾನ್ಯ ಶ್ರೀ ರವಿದಾಸ ಜಾಧವ ತಾಲ್ಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷರು , ಮಾನ್ಯ ಶ್ರೀ ಇಲಾಹಿ ನಧಾಫ ಉಪಾಧ್ಯಕ್ಷರು ಪಟ್ಟಣ ಪಂಚಾಯತಿ, ಮಾನ್ಯ ಶ್ರೀ ಸಂಜಯ ಇಂಗಳೆ ತಹಶೀಲ್ದಾರರು, ಮಾನ್ಯ ಶ್ರೀ ಸಂಜಯ ಖಡಗೇಕರ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಸಾಹೇಬಗೌಡ ಜುಂಜುರವಾಡ ಅಆPಔ, ಶ್ರೀ ಭಾಸ್ಕರ ತಾವಶೆ ಚೀಫ್ ಆಫೀಸರ್ ಪಟ್ಟಣ ಪಂಚಾಯತ ಚಡಚಣ, ಶ್ರೀ ಚಿದಾನಂದ ಕಟ್ಟಿಮನಿ ಃಇಔ, ಪಟ್ಟಣ ಪಂಚಾಯತ ಸದಸ್ಯರುಗಳಾದ ವಾಶೀಮ ಮುಲ್ಲಾ, ಚಂದ್ರಕಾAತ ಕಲಮನಿ ಉಪಸ್ಥಿತರಿದ್ದರು. ಇಲಾಖೆಯ ಡಾ: ಶಿವಾನಂದ ನಾಯಿಕ , ಡಾ: ವೈಶಾಲಿ ಹಿರೇಮಠ, ಡಾ: ಸಂಗನಗೌಡ ಬಿರಾದಾರ, ಡಾ: ಪ್ರಮೋದ ಹೋರ್ತಿ, ಅಶೋಕ ಮಾನೆ, ರಾಕೇಶ ಬಿಜ್ಜೂರ, ಪ್ರಕಾಶ ಕುಂಬಾರ, ಹಾಗೂ ಸಿಬ್ಬಂದಿಯವರು ಲಸಿಕೆದಾರರು ಉಪಸ್ಥಿತರಿದ್ದರು.