
ಬೀದರ್: ನ.೫:ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಮಂಗಳವಾರ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆ ಲಸಿಕೆ ಉಚಿತವಾಗಿ ನೀಡಲಾಯಿತು.
ಕಾಲುಬಾಯಿ ರೋಗ ವೈರಾಣುವಿನಿಂದ ಜಾನುವಾರಿಗೆ ಬರುವ ರೋಗವಾಗಿದೆ. ಇದು, ಒಂದು ಜಾನುವಾರಿನಿಂದ ಇನ್ನೊಂದಕ್ಕೆ ಬಹಳ ಬೇಗ ಹರಡುತ್ತದೆ. ಹೀಗಾಗಿ ರೋಗ ತಡೆಗೆ ರೈತರು ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ. ಸರಿತಾ ಪಾಟೀಲ ತಿಳಿಸಿದರು.
ಡಿಸೆಂಬರ್ ೩ ರ ವರೆಗೆ ಕಾಲುಬಾಯಿ ರೋಗ ಲಸಿಕೆ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ಅಭಿಯಾನಕ್ಕೆ ಚಾಲನೆ ನೀಡಿದ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಅವರು, ರೈತರು ಅಭಿಯಾನದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಪಶು ವೈದ್ಯ ಪರಿವೀಕ್ಷಕ ಧೋಂಡಿಬಾ ಮೇತ್ರೆ, ಹಿರಿಯ ಮುಖಂಡರಾದ ಬಸವರಾಜ ಅಮ್ಮಣ್ಣ, ಬಾಬುರಾವ್ ಬಿಟ್ಟೆ, ಕೃಷ್ಣ ಭಾಗನೋರ, ಪಶು ವೈದ್ಯಕೀಯ ಮತ್ತು ಪಶು ಸೇವಾ ಇಲಾಖೆ ಸಿಬ್ಬಂದಿ, ರೈತರು ಇದ್ದರು.

































