ಲಾರಿ ಚಾಲಕರಿಗೆ ಆಹಾರ ಕಿಟ್ ವಿತರಣೆ

ಜೇವರ್ಗಿ,ಸೆ.೨೯-ಭಾರೀ ಮಳೆ ಮತ್ತು ಪ್ರವಾಹದಿಂದ ಭೀಮಾ ಸೇತುವೆ ಬಂದ್ ಆಗಿರುವುದರಿಂದ ಲಾರಿ ಚಾಲಕರು ಮತ್ತು ಕ್ಲೀನರ್‌ಗಳು ಸಿಲುಕಿಕೊಂಡು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಸಮಿತಿ ಅಧ್ಯಕ್ಷ ಮೋಹಿಯುದ್ದೀನ್ ಇನಾಂದಾರ್ ಹಾಗೂ ಯಾಳವಾರದ ಆದರ್ಶ ಗ್ರಾಮ ಸಮಿತಿ ಸಹಯೋಗದಲ್ಲಿ ಪರಿಹಾರ ಹಾಗೂ ಸೇವಾ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ೫೦೦ ಕ್ಕೂ ಹೆಚ್ಚು ಲಾರಿ ಚಾಲಕರು ಮತ್ತು ಕ್ಲೀನರ್‌ಗಳಿಗೆ ಆಹಾರ ಕಿಟ್‌ಗಳು ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಈ ವಿತರಣಾ ಕಾರ್ಯಕ್ರಮಕ್ಕೆ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷ ಇಬ್ರಾಹಿಂ ಪಟೇಲ್ ಸಾಬ್ ಹಾಗೂ ಅಜೀಜ್ ಪಟೇಲ್ ಸಾಬ್ ಮುನ್ನಡೆ ವಹಿಸಿದರು. ರೈತ ನಾಯಕರಾದ ಬಾಬು ಪಾಟೀಲ್ ಸಾಬ್, ರಾಜಾ ಪಟೇಲ್ ಸಾಬ್, ನಿಸಾರ್ ಅಹ್ಮದ್ ಇನಾಂದಾರ್ ಹಾಗೂ ಶೈಖ್ ಸದ್ದಾಂ ಹುಸೇನ್ ಸಕ್ರಿಯವಾಗಿ ಪಾಲ್ಗೊಂಡರು.