೨೦೦ ಮಂದಿಗೆ ಫುಡ್ ಕಿಟ್‌ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಕೋಲಾರ,ಮೇ,೨೯- ಮಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿ.ಎಸ್.ಆರ್. ಅನುದಾನದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ. ಹಸಿವು ಮುಕ್ತ ರಾಷ್ಟ್ರ ನಿರ್ಮಾಣದ ಸರ್ಕಾರದ ಯೋಜನೆಗೆ ಪೂರಕವಾಗಿ ಸಂಸ್ಥೆಯು ಬಡಜನತೆಗೆ ನಿರಂತರವಾಗಿ ಪುಡ್ ಕಿಟ್ (ತಿಂಡಿ,ಊಟದ ಪೊಟ್ಟಣ) ವಿತರಣೆಗೆ ಮುಂದಾಗಿದೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಸಂಸದ ಮಲ್ಲೇಶ್ ಬಾಬು ತಿಳಿಸಿದರು,


ನಗರದ ಎಂ.ಬಿ.ರಸ್ತೆಯ ಶಾರದ ಟಾಕೀಸ್ ಹಿಂಭಾಗದ ರಸ್ತೆಯಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋಲಾರ ನಗರದಲ್ಲಿ ಮೊಬೈಲ್ ವಾಹನ ಮೂಲಕ ೨೦೦ ಮಂದಿಗೆ ಫುಡ್ ಕಿಟ್‌ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಗಳಾಗಿ ದುಡಿಯುತ್ತಿದ್ದು ಹೊರಗಿನ ಸ್ಥಳಗಳಿಂದ ನಿತ್ಯ ಪ್ರಯಾಣಿಸುವವರಿಗೆ ವಸತಿ ನಿಲಯಗಳನ್ನು ನಿರ್ಮಿಸಿ ಕೊಡುವ ಮೂಲಕ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಟ್ಟರೆ ಬಹಳಷ್ಟು ಅನುಕೊಲಕರವಾಗಲಿದೆ ಎಂದರು,


ಗ್ರಾಮೀಣಾ ಪ್ರದೇಶಗಳಿಂದ ನಗರ ಪ್ರದೇಶಗಳಲ್ಲಿ ಶಿಕ್ಷಣ, ತರಬೇತಿ ಹಾಗೂ ವಿವಿಧ ಕೆಲಸಗಳು ಮಾಡುವಂತ ಮಹಿಳೆಯರು ವಸತಿ ಸೌಲಭ್ಯಗಳಿಲ್ಲದೆ ನಿತ್ಯ ಪ್ರಯಾಣಿಸುವ ಹರಸಾಹಸ ಮಾಡುವ ಮೂಲಕ ಪರದಾಡುತ್ತಿದ್ದಾರೆ. ಅವರಿಗೆಲ್ಲಾ ವಸತಿ ಸೌಲಭ್ಯಗಳು ಕಲ್ಪಿಸಿ ಕೊಟ್ಟಲ್ಲಿ ಬಹಳಷ್ಟು ಅನಾಹುತಗಳು ತಪ್ಪಲಿದೆ ಎಂದು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿದ್ಯಾರ್ಥಿನಿಯರಿಗೆ ಉಂಟಾದ ತೊಂದರೆಯ ಪ್ರಕರಣವನ್ನು ವಿವರಿಸಿದರು.


ಆಹಾರ ಕಿಟ್‌ಗಳ ವಿತರಣೆ ಮಾಡುತ್ತಿರುವುದರಿಂದ ಬಹಳಷ್ಟು ಬಡ ಜನತೆ ಹಸಿವೆಯಿಂದ ಮುಕ್ತರಾಗ ಬಹುದಾಗಿದೆ. ಇದರ ಜೂತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಗಳು, ಬೀದಿ ದೀಪದ ವ್ಯವಸ್ಥೆಗಳಿಲ್ಲದ ಕಡೆ ಸೋಲರ್ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ಅನುಕೊಲಕರವಗಲಿದೆ ಅದೇ ರೀತಿ ಅಂಗನವಾಡಿ ಶಾಲೆಗಳನ್ನು ಅಭಿವೃದ್ದಿ ಪಡೆಸುವ ಮೂಲಕ ಸಿ.ಎಸ್.ಆರ್. ಅನುದಾನಗಳನ್ನು ಸಾರ್ಥಕ ಪಡೆಸುವಂತಾಗ ಬೇಕೆಂದು ಸಲಹೆ ನೀಡಿದರು.


ಸಮಾಜ ಸೇವಕ ಹಾಗೂ ಜೆ.ಡಿ.ಎಸ್.ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಜೊತೆಗೆ ಮಬಾರ್ ಚಾರಿಟಬಲ್ ಟ್ರಸ್ಟ್ ಕೈ ಜೋಡಿಸಿರುವುದು ಉತ್ತಮ ಕೆಲಸವಾಗಿದೆ. ತಮ್ಮ ವ್ಯಾಪಾರ ವಹಿವಾಟುಗಳಲ್ಲಿ ಬಂದ ಲಾಭಾಂಶದಲ್ಲಿ ಸಮಾಜದ ಸುಧಾರಣೆ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು.


ಮಲಬಾರ್ ಗೋಲ್ಡನ್ ಅಂಡ್ ಡೈಮಂಡ್ ಕೇವಲ ಶ್ರೀಮಂತರ ಜತೆಗೆ ವ್ಯಾಪಾರ ವಹಿವಾಟುಗಳನ್ನು ಹೊಂದಿದೆ ಎಂಬುವುದು ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿದೆ ಅದರೆ ಮಲಬಾರ್ ಚಾರಿಟಬಲ್ ಟ್ರಸ್ಟ್ ತನ್ನ ಲಾಬಾಂಶವನ್ನು ಸಮಾಜ ಸುಧಾರಣೆಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವುದು ಅಭಿನಂದರ್ನಾಹವಾಗಿದೆ. ಇದೇ ಮಾದರಿಯಲ್ಲಿ ಎಲ್ಲಾ ಸಂಸ್ಥೆಗಳು ಮಲಬಾರ್ ಚಾರಿಟಬಲ್ ಟ್ರಸ್ಟ್‌ನ್ನು ಮಾದರಿಯಾಗಿಸಿ ಕೊಂಡು ತಮ್ಮ ಸಂಸ್ಥೆ ಬೆಳವಣಿಗೆಯ ಜೂತೆಗೆ ಸಾಮಾಜಿಕ ಸೇವೆಗಳಿಗೂ ಪ್ರೋತ್ಸಾಹಿಸುವ ಕೆಲಸಗಳನ್ನು ಮಾಡುವಂತಾಗ ಬೇಕೆಂದು ಕರೆ ನೀಡಿದರು.


ಮಹಿಳೆರಿಯಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ಪ್ರತಿದಿನ ಆಹಾರ ಕಿಟ್‌ಗಳು ಸುಮಾರು ೭೦ ಸಾವಿರಕ್ಕೂ ಹೆಚ್ಚು ವಿತರಿಸಲಾಗುತ್ತಿದೆ. ಇದಕ್ಕಾಗಿ ೧೫೩ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವಿನಿಯೋಗಿಸುತ್ತಿದೆ. ೧೧೨ ನಗರಗಳಲ್ಲಿ ೧೬೭ ಮಲಬಾರ್ ಷೋ ರೂಂ ಪ್ರಾರಂಭಿಸಿದೆ. ೫೩ ಕೋಟಿ ರೂಗಳಿಗೆ ಹೆಚ್ಚು ಅಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಮಾಡಲು ಮುಂದಾಗಿದೆ. ೩೨೪೦೦ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದೆ ಕೋಲಾರದಲ್ಲಿ ೭೧೬ ಮಂದಿಗೆ ಒಟ್ಟು ೭೦ ಲಕ್ಷ ರೂ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.


ಇದೇ ಸಂದರ್ಭದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್‌ನ ಅಧಿಕಾರಿ ಅಲ್ತಾಫ್ ಅವರು ಗಣ್ಯರಿಗೆ ನೆನಪಿನ ಕಾಣಿಕೆ ವಿತರಿಸಿದರು.ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು,