Home ಜಿಲ್ಲೆ ಜಾನಪದ ಜಾತ್ರೆ, ಪ್ರಶಸ್ತಿ ವಿತರಣಾ ಕಾರ್ಯಕ್ರಮ

ಜಾನಪದ ಜಾತ್ರೆ, ಪ್ರಶಸ್ತಿ ವಿತರಣಾ ಕಾರ್ಯಕ್ರಮ

ಧಾರವಾಡ, ಜೂ೧: ಧಾರವಾಡದ ಚರಂತಿಮಠ ಗಾರ್ಡನ್ ಸಮುದಾಯ ಭವನದಲ್ಲಿ ನಾಟ್ಯ ಬೈರವಿ ಕಲಾ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಲಾದ ಜಾನಪದ ಜಾತ್ರೆ, ಜಿಲ್ಲಾ ಮಟ್ಟದ ವೈಯಕ್ತಿಕ ಕಿರಿಯರ ನೃತ್ಯ ಸ್ಪರ್ಧೆ ಹಾಗೂ ನಾಟ್ಯ ಕಲಾಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಸರ್ವಧರ್ಮ ಸಮಾಜ ಸೇವಕ ಡಾ.ರಮೇಶ್ ಮಹಾದೇವಪ್ಪನವರ ಉದ್ಘಾಟಿಸಿದರು.


ಜಾನಪದ ಕಲೆ, ಸಂಸ್ಕöÈತಿ ಮತ್ತು ನೃತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ನಮ್ಮ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನಮ್ಮ ಸಾಂಸ್ಕöÈತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತವೆ ಎಂದರು.


ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಪುಟಾಣಿ ನೃತ್ಯಪಟುಗಳ ಅದ್ಭುತ ಪ್ರದರ್ಶನಗಳು ಮನಸೂರೆಗೊಂಡವು.


ಈ ಸಂದರ್ಭದಲ್ಲಿ ಸತೀಶ್ ತುರುಮರಿ, ಶ್ರೀಮತಿ ಪುಷ್ಪ ನವಲಗುಂದ್, ಶ್ರೀಮತಿ ಸೀಮಾ ಸಾಣಿಕೊಪ್ಪ, ಡಾ. ಪ್ರಕಾಶ್ ಮಲ್ಲಿಗವಾಡ, ಡಾ. ಪ್ರಕಾಶ್ ಕ್ಷತ್ರಿಯ, ಸಂಜೀವ್ ಕುಂದಗೋಳ ಸೇರಿದಂತೆ ಹಲವಾರು ಗಣ್ಯರು, ಕಲಾಭಿಮಾನಿಗಳು ಹಾಗೂ ನೃತ್ಯಪಟುಗಳು ಉಪಸ್ಥಿತರಿದ್ದರು.