ಕಲಬುರಗಿ,ನ.4-ತಾಲ್ಲೂಕಿನ ಝಾಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಸುರೇಶ್ ಮಾಂಗ್, ಸೈಬಣ್ಣ ಮೇಲಿನಕೇರಿ, ಶರಣಪ್ಪ ಪೂಜಾರಿ, ಭೀಮರಾಯ ನಾಯ್ಕೋಡಿ, ಮರೆಪ್ಪ ಕಟ್ಟಿಮನಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಡಾ.ವಾಸುದೇವ ಸೇಡಂ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಎಂ.ಬಿ.ನಿಂಗಪ್ಪ, ಕಾರ್ಯದರ್ಶಿ ಹೆಚ್.ಬಿ.ಪಾಟೀಲ, ಶಾಲೆಯ ಮುಖ್ಯೋಪಾಧ್ಯಾಯ ದೇವಿಂದ್ರಪ್ಪ ಗಣಮುಖಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಸುನೀಲಕುಮಾರ ಒಂಟಿ, ಬಸಯ್ಯ ಸ್ವಾಮಿ ಹೊದಲೂರ, ಎಸ್‍ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಪೂಜಾರಿ, ಶಿವಯೋಗಪ್ಪ ಬಿರಾದಾರ, ರಾಜುಗೌಡ ಪಾಟೀಲ, ಬಸವರಾಜ ನಾಯ್ಕೋಡಿ, ಶಿಕ್ಷಕಿಯರಾದ ಶಾಂತಾಬಾಯಿ ಹಿರೇಮಠ, ಶಾರದಾ ಲಂಡನಕರ್, ಬಿಸಿಯೂಟದ ಸಿಬ್ಬಂದಿಗಳಾದ ಸಂಗೀತಾ ಕಟ್ಟಿಮನಿ, ಅಂಗನವಾಡಿ ಶಿಕ್ಷಕಿ ಭಾರತಿ, ಕಾರ್ಯಕರ್ತೆ ಶಿಲ್ಪಾ ನಡುವಿನಮನಿ, ಪಾರ್ವತಿ ಪೂಜಾರಿ ಸೇರಿದಂತೆ ಗ್ರಾಮದ ಗಣ್ಯರು, ಶಾಲಾ ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು.























