Home ಜಿಲ್ಲೆ ಕಲಬುರಗಿ ಅಪ್ಪ ಕೆರೆಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ:ಹೂವುಗಳಲ್ಲಿ ಅಲಂಕೃತ ಸಂವಿಧಾನ ಪ್ರತಿಕೃತಿ ಪ್ರಮುಖ...

ಅಪ್ಪ ಕೆರೆಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ:ಹೂವುಗಳಲ್ಲಿ ಅಲಂಕೃತ ಸಂವಿಧಾನ ಪ್ರತಿಕೃತಿ ಪ್ರಮುಖ ಆಕರ್ಷಣೆ

ಕಲಬುರಗಿ,ಫೆ.23: ನಗರದ ಶ್ರೀ ಶರಣಬಸವೇಶ್ವರರ ಕೆರೆ ಉದ್ಯಾನವನ ಆವರಣದಲ್ಲಿ ರವಿವಾರ ಎರಡು ದಿನಗಳ ಫಲಪುಷ್ಟ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು 1.50 ಲಕ್ಷ ಹೂವುಗಳಿಂದ ಆಲಂಕರಿಸಿದ ಭಾರತದ ಸಂವಿಧಾನ ಪ್ರತಿಕೃತಿ ಪ್ರಮುಖ ಅಕರ್ಷಣೀಯವಾಗಿ ಕಂಡುಬಂತು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶ್ರೀ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಜೈ ಶ್ರೀಕೃಷ್ಣ ಇವೆಂಟ್ಸ್ ಹೂ ನಿರ್ಮಾಣ ವಿನ್ಯಾಸಕ ಕೆ.ಜಗದೀಶ ಅವರ ಕಲಾಕೃತಿಯಲ್ಲಿ ಮೂಡಿಬಂದಿರುವ ಭಾರತೀಯ ಸಂವಿಧಾನ ಪ್ರತಿಕೃತಿ ಅಲಂಕಾರಕ್ಕೆ ವಿವಿಧ ತಳಿಯ ಚೆಂಡು, ಸೇವಂತಿಗೆ, ಚೈನಾ ಆಸ್ಟರ್, ಆಸ್ಪರಾಗಸ್ ಹಾಗೂ ವಿವಿಧ ಅಲಕಂಕಾರಿಕ ಸುಮಾರು 1.50 ಲಕ್ಷ ಹೂವುಗಳಿಂದ ಬಳಸಿದ್ದು, ಇದು ವೀಕ್ಷಕರ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತ ಸಂವಿಧಾನ ಪ್ರತಿಕೃತಿಯ ಕಲಾಕೃತಿ ಸುಂದರವಾಗಿ ಕಾಣಲು ಸುತ್ತಲು ವಿವಿಧ ತರಕಾರಿಗಳಾದ ಕಲ್ಲಂಗಡಿ, ಬದನೆಕಾಯಿ, ಸೋರೆಕಾಯಿ, ಗಜರಿ, ಸವತೆಕಾಯಿ, ಕ್ಯಾಪ್ಸಿಕಂ ಹಾಗೂ ಇತರೆ ತರಕಾರಿಗಳನ್ನು ಬಳಸಲಾಗಿದೆ. ಇದಲ್ಲದೆ ತರಕಾರಿಯಲಿ ಕೆತ್ತನೆ ಮಾಡಿ ಕಲಬುರಗಿಯ ಪ್ರಮುಖ ಪ್ರವಾಸಿ ಕೇಂದ್ರಗಳಾದ ಶ್ರೀ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇನವಾಜ್ ದರ್ಗಾ, ಕಲಬುರಗಿ ಕೋಟೆ, ಬುದ್ಧ ವಿಹಾರ ಮೂಡಿಬಂದಿರುವುದು ಸಹ ಸ್ಥಳೀಯರಿಗೆ ಇದು ಮತ್ತಷ್ಟು ಹತ್ತಿರವಾಗಿ ಕಾಣಲಿದೆ.
ತೋಟಗಾರಿಕೆ ಇಲಾಖೆಯ ಮಹಿಳಾ ಸಿಬ್ಬಂದಿಯವರು ವಿಶೇಷವಾಗಿ ಸಿದ್ದಪಡಿಸಲಾದ ತರಕಾರಿ ರಂಗೋಲಿ ಮತ್ತು ಸೆಲ್ಫಿ ಪಾಯಿಂಟ್ ಕೂಡಾ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಮಹಿಳಾ ಸಿಬ್ಬಂದಿಯ ಪರಿಶ್ರಮ ಕಂಡ ಪ್ರಾದೇಶಿಕ ಆಯುತೆ ಜಹೀರಾ ನಸೀಮ್ ಮತ್ತು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರುಯ ಮುಕ್ಯ ಮನಸ್ಸಿನಿಂದ ಪ್ರಶಂಸಿದರು.
ಇನ್ನು ಕಲಬುರಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಪಡೆದ ರೈತರು ಬೆಳೆದ ವಿವಿಧ ತಳಿಯ ಹಣ್ಣು, ತರಕಾರಿ, ಹೂವು ಬೆಳೆಗಳ ಉತ್ಪನ್ನಗಳನ್ನು ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿಶೇಷವಾಗಿ ಅಫಜಲಪೂರ ತಾಲ್ಲೂಕಿನ ಲಚ್ಚಪ್ಪಾ ಜಮಾದಾರ್ ಅವರು ಕ್ಯಾಲಿಫೆÇೀರ್ನಿಯಾ ಕ್ವೀನ್ ಬೆರ್ರಿ, ಚಿಂಚೋಳಿ ತಾಲ್ಲೂಕಿನ ಪುದಿನಾ ಮತ್ತು ಪೈನಾಪಲ್, ಕಲಬುರಗಿ ತಾಲ್ಲೂಕಿನ ಅಣಬೆ ಮತ್ತು ತಾಳೆಬೆಳೆ, ಆಳಂದ ತಾಲ್ಲೂಕಿನ ಬಾಳೆ ಪಪ್ಪಾಯ ಇತರೆ ಅನೇಕ ಬೆಳೆಗಳು ಒಳಗೊಂಡಂತೆ 500 ಕ್ಕೂ ಹೆಚ್ಚು ಪ್ರದರ್ಶಿಕೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಕಲ್ಲಂಗಡಿಯಲ್ಲಿ ಅರಳಿದ ನಾಯಕರು: ಕಲ್ಲಂಗಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ದ.ರಾ. ಬೇಂದ್ರೆ, ಸ್ವಾತಂತ್ರ್ಯ ಹೋರಾಟಗಾರರಾದ ಭಗತಸಿಂಗ್, ಝಾನ್ಸಿ ರಾಣಿ ಲಕ್ಷೀಬಾಯಿ, ಚಂದ್ರಶೇಖರ ಆಝಾದ್, ಸಂಗೊಳ್ಳಿ ರಾಯಣ್ಣ, ಸುಭಾಷ ಚಂದ್ರಭೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಕಿತ್ತೂರ ರಾಣಿ ಚೆನ್ನಮ್ಮ ಹೀಗೆ ಅನೇಕರ ಕಲಾಕೃತಿಗಳು ನೋಡುಗರಿಗೆ ಸಂತೋಷ ಉಂಟು ಮಾಡಲಿವೆ. ಇದಲ್ಲದೆ ಹುಬ್ಬಳ್ಳಿಯ ಇಸ್ಮಾಯಿಲ್ ಅವರ ಕಲಾ ಕುಂಚದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮೂಡಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಇನ್ನು ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ನೇರವಾಗಿ ಹಣ್ಣು ಮತ್ತು ತರಕಾರಿ ಹಾಗೂ ಸಂಸ್ಕರಣಾ ಉತ್ಪನ್ನಗಳು ಮಾರಾಟಕ್ಕಾಗಿ ಇಲ್ಲಿ ವ್ಯವ್ಯಸ್ಥೆ ಕಲ್ಪಿಸಲಾಗಿದೆ. ಅಫಜಲಪೂರ ದ್ರಾಕ್ಷಿ ಬೆಳೆಗಾರರಾದ ಜಯಪ್ಪ ಎಮ್. ಕೊರಬು, ರೇವಣಸಿದ್ದಪ್ಪ ಹಾಳಕಿ, ಅರವಿಂದ ಹಾಳಕಿ ಅವರು ದ್ರಾಕ್ಷಿ ಮತ್ತು ಸಾವಯವ ಉತ್ಪನ್ನಗಳು, ಬಾಪುಗೌಡ ಬಿರಾದಾರ ಗುಡ್ಡೆವಾಡಿ ಅವgರು ಬಾಳೆಯಿಂದ ತಯಾರಿಸಿದ ಚಿಪ್ಸ್, ಹಣಮಂತಪ್ಪ ಬೆಳಗುಂಪಿ ಅವರು ಸಾವಯವ ತೋಟಗಾರಿಕೆ ಉತ್ಪನ್ನಗಳು, ಲಕ್ಷೀಕಾಂತ ಹಿಬಾರೆ ರವರ ಸಾವಯವ ಅರಶೀಣ ಮತ್ತು ಇತರೆ ಉತ್ಪನ್ನಗಳು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ರದ್ದೇವಾಡಿ ಕೃಷಿ ವಿಜ್ಞಾನ ಕೇಂದ್ರದಿಂದ ತಾರಸಿ ಮತ್ತು ಕೈ ತೋಟದ ಬೀಜಗಳ ಕಿಟ್‍ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಫಲಪುಷ್ಪ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ ಮಾತನಾಡಿ, ತೋಟಗಾರಿಕೆಯ ಇಲಾಖೆ ತುಂಬಾ ಪರಿಶ್ರಮ ಹಾಕಿ ಒಳ್ಳೆಯ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇದು ರೈತಾಪಿ ವರ್ಗದವರಿಗೆ ತುಂಬಾ ಅನುಕೂಲವಾಗಿದೆ. ತರಕಾರಿ, ಹಣ್ಣು ಬೆಳೆಯಲು ಹೊಸ ತಳಿ, ಪ್ರಯೋಗ ಕುರಿತು ಅವರಿಗೆ ಜಾಗೃತಿ ಮೂಡಿಸಲು ಸ್ಟಾಲ್ ಸಹ ಹಾಕಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯಬೇಕು. ಬೆಂಗಳೂರು, ಮೈಸೂರಿನಲ್ಲಿ ಇಂತಹ ಪ್ರದರ್ಶನ ಕಾಣಲು ಸಿಗುತ್ತಿತು. ಇದೀಗ ಕಲಬುರಗಿಯಲ್ಲಿಯೆ ಪ್ರದರ್ಶಕ್ಕೆ ವ್ಯವಸ್ಥೆ ಮಾಡಿದ್ದು ಒಳ್ಳೆಯದು ಎಂದರು.
ಸಾವರ್Àಜನಿಕರು, ಮಕ್ಕಳು ವೀಕ್ಷಿಸುವಂತೆ ಡಿ.ಸಿ., ಆರ್.ಸಿ. ಮನವಿ: ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಮಾತನಾಡಿ, ಎರಡು ದಿನ ಫಲಪುಷ್ಪ ಪ್ರದರ್ಶನ ಸರ್ವರಿಗೂ ಉಚಿತವಾಗಿದೆ. ವಿಶೇಷವಾಗಿ ನಗರದ ನಿವಾಸಿಗಳು ಶಾಲಾ ಮಕ್ಕಳು ಭೇಟಿ ನೀಡಿ ತರಕಾರಿ-ಹಣ್ಣುಗಳಲ್ಲಿ ಮೂಡಿಬಂದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು ಎಂದರು.
ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಮೂರು ವರ್ಷಗಳ ನಂತರ ಸಂವಿಧಾನ ವಿಷಯಾಧಾರಿತ ಕೇಂದ್ರಿತವಾಗಿ ಎರಡು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಎಲ್ಲವು ಕಲಾವಿದನ ಕೆತ್ತನೆಯಲ್ಲಿ ಮೂಡಿಬಂದಿವೆ. ಅದ್ಭುತ ಪ್ರದರ್ಶನ ಇದಾಗಿದೆ. ಶಾಲಾ ಮಕ್ಕಳು, ಯುವಕರು ಬಂದು ನೋಡಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪಾ ಪಾಟೀಲ ಧಂಗಾಪೂರ್, ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಮಲ್ಲಿಕಾರ್ಜುನ ಭೂಶಟ್ಟಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಇನಾಮದಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ಬಾಬುರಾವ ಪಾಟೀಲ, ಸುರೇಂದ್ರನಾಥ, ಶಂಕರಗೌಡ, ಸಂತೋಷ ತಾಂಡುರ, ರಾಜಕುಮಾರ, ಎಂ.ಡಿ ಸಮಿಯೋದ್ದಿನ್, ಅಜಿಮೋದ್ದಿನ್, ಶಂಕರ ಪಟವಾರಿ, ವೆಂಕಟ ಸಜ್ಜನ ಸೇರಿದಂತೆ ತೋಟಗಾರಿಕೆ ಇಲಾಖೆಯ ಇನ್ನಿತರ ಅಧಿಕಾರಿ-ಸಿಬ್ಬಂದಿಗಳು ಹಾಜರಿದ್ದರು.