ಕಲಬುರಗಿ ಜಿ.ಟಿ.ಟಿ.ಸಿ. ಯಲ್ಲಿ ಧ್ವಜಾರೋಹಣ

ಕಲಬುರಗಿ,ಸೆ.19- ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಜಿಟಿಟಿಸಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ ಬಿ. ಪೂಜಾರಿ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಲಬುರಗಿ (ಜಿಟಿಟಿಸಿ) ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಬುಧವಾರ ಧ್ವಜಾರೋಹಣ ನೇರವೇರಿಸಿದರು.

 ಈ ಸಂದರ್ಭದಲ್ಲಿ  ಕಾಲೇಜಿನ ಪ್ರಾಂಶುಪಾಲರಾದ ಕು.ಸುಧಾರಾಣಿ ಅಟ್ಟೂರ, ಬೆಂಗಳೂರಿನ ಜಿಟಿಟಿಸಿ ಮ್ಯಾನೇಜರ್ ಎಮ್.ಸಿ.ಡಿ.  ಯವರಾದ  ರಾಜಕುಮಾರ ಜಿ ಸೇರಿದಂತೆ ಕಲಬುರಗಿ ಜಿಟಿಟಿಸಿ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು   ಉಪಸ್ಥಿತರಿದ್ದರು.