
ಹೈದ್ರಾಬಾದ,ಆ.22-ಹೈದ್ರಾಬಾದದ ಪ್ರಗತಿನಗರ ಸೀನಿಯರ್ ಸಿಟಿಜನ್ ಅಸೋಸಿಯೇಶನ್ ಕಚೇರಿಯಲ್ಲಿ ಶುಕ್ರವಾರ ವಿಶ್ವ ಹಿರಿಯರ ನಾಗರಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ 75 ವರ್ಷ ಪೂರೈಸಿದ ಅಸೋಸಿಯೇಶನ್ನಿನ ಹಿರಿಯ ನಾಗರಿಕರಾದ ಎಂ.ರಾಮ ಕೋಟೇಶ್ವರರಾವ, ವಿ.ಸಾಂಬ ಶಿವರಾವ, ಟಿಎಂಎಸ್ ಕೋಟೇಶ್ವರರಾವ, ಎಂ ರಾಮರಾಜು ಮತ್ತು ಪಿ.ರಾಮಕೃಷ್ಣ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಅಸೋಸಿಯೇಶನ್ ಅಧ್ಯಕ್ಷ ಸಿ.ಹೆಚ್. ಕಾಮಯ್ಯ, ಖಜಾಂಚಿ ಆರ್.ವಿ. ರಮಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ತೋಟಾ ಮತ್ತು ಇತರ ಪದಾಧಿಕಾರಿಗಳು ಹಾಗೂ ಅಸೋಸಿಯೇಶನ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನಿತ ಹಿರಿಯ ನಾಗರಿಕರಿಗೆ ಅಭಿನಂದಿಸಿದರು.

































