ರಸ್ತೆ ಅಪಘಾತ ಐವರ ಸಾವು

ಗುರುಗ್ರಾಮ್,ಸೆ.೨೭- ಇಂದು ಶನಿವಾರ ಬೆಳಗಿನ ಜಾವ ೪.೩೦ ರ ಸುಮಾರಿಗೆ ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇಯ ಝಾರ್ಸಾ ನಿರ್ಗಮನದ ಬಳಿ ವೇಗವಾಗಿ ಬಂದ ಥಾರ್ ಕಾರು ನಿಯಂತ್ರಣ ತಪ್ಪಿ, ವಿಭಜಕಕ್ಕೆ ಡಿಕ್ಕಿ ಹೊಡೆದು, ಹಲವಾರು ಬಾರಿ ಉರುಳಿಬಿದ್ದಿದೆ. ಈ ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ.


ಕಾರಿನಲ್ಲಿದ್ದ ಆರು ಜನರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಯುವತಿಯರು ಮತ್ತು ಇಬ್ಬರು ಯುವಕರು ಸೇರಿದ್ದಾರೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು , ಗುರುಗ್ರಾಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಗ್ರಾಮ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ ಮೃತ ಯುವಕರು ಮತ್ತು ಯುವತಿಯರ ದೇಹದ ಭಾಗಗಳು ೧೦೦ ಮೀಟರ್ ದೂರದಲ್ಲಿ ಚದುರಿಹೋಗಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.


ವರದಿಗಳ ಪ್ರಕಾರ, ಶನಿವಾರ ಬೆಳಗಿನ ಜಾವ ೪.೩೦ ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಯುಪಿ ೮೧ಸಿಎಸ್S ೨೩೧೯ ಸಂಖ್ಯೆಯ ಥಾರ್ ಕಾರು, ಝಾರ್ಸಾದಾ ಚೌಕ್ ನಿರ್ಗಮನ ಸಂಖ್ಯೆ ೯ ರಿಂದ ದೆಹಲಿಗೆ ಹೋಗುವ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿತ್ತು. ವಾಹನವು ನಿಯಂತ್ರಣ ಕಳೆದುಕೊಂಡು ನೇರವಾಗಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಥಾರ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.


ಮೃತ ಐವರಲ್ಲಿ ನಾಲ್ವರನ್ನು ಗುರುತಿಸಲಾಗಿದೆ. ಪ್ರತಿಷ್ಠ ಮಿಶ್ರಾ ರಾಯ್ ಬರೇಲಿಯ ನಿವಾಸಿ, ಕಪಿಲ್ ಶರ್ಮಾ ಬುಲಂದ್ ಶಹರ್ ನಿವಾಸಿ, ಆದಿತ್ಯ ಪ್ರತಾಪ್ ಸಿಂಗ್ ಆಗ್ರಾ ನಿವಾಸಿ ಮತ್ತು ಗೌತಮ್ ಹರಿಯಾಣದ ಸೋನಿಪತ್ ನಿವಾಸಿ .


ಪೊಲೀಸ್ ಮೂಲಗಳ ಪ್ರಕಾರ, ಅವರೆಲ್ಲರೂ ಪಬ್ ಬ್ಯಾಂಡ್‌ಗಳನ್ನು ಧರಿಸಿದ್ದುಅವರು ಪಬ್‌ನಲ್ಲಿ ತಡರಾತ್ರಿ ಪಾರ್ಟಿಯಿಂದ ಹಿಂತಿರುಗುತ್ತಿದ್ದರು ಎನ್ನಲಾಗಿದೆ ಈ ಸಮಯದಲ್ಲಿ, ಥಾರ್ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.


ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯುಪಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಥಾರ್‌ನಲ್ಲಿ ಒಟ್ಟು ಆರು ಜನರಿದ್ದರು ಎಂದು ವರದಿಯಾಗಿದೆ..